ಉಡುಪಿ, ಜು. 26 : ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಮುಖ್ಯ ದ್ವಾರದಲ್ಲಿ ಶನಿವಾರ ಮುಂಜಾನೆ 1.30ಗಂಟೆ ಸುಮಾರಿಗೆ ಕಳ್ಳತನ ನಡೆಸಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರು ಹಿಡಿದಿದ್ದಾರೆ. ದುಷ್ಕರ್ಮಿಗಳು ದೇವಸ್ಥಾನದ ಮುಂಭಾಗದ ಗೇಟ್ನ ಬೀಗ ಮುರಿಯಲು ಯತ್ನಿಸಿದ್ದು ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಅವರನ್ನು ತಡೆದಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಅವರ ಚಟುವಟಿಕೆಗಳಿಂದ ಸಂದೇಹಗೊಂಡ
ಬ್ರಹ್ಮಾವರ:ಜು. 24: ಬ್ರಹ್ಮಾವರ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಸಾಮಾಜಿಕ ಹೋರಾಟಗಾರ ಸತೀಶ್ ಪೂಜಾರಿ ಬಾರ್ಕೂರು ಜುಲೈ 23 ರಂದು ನಿಧನರಾಗಿದ್ದಾರೆ. ಸತೀಶ್ ಪೂಜಾರಿ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ರಹ್ಮಾವರ ತಾಲೂಕು ರಚನೆಗಾಗಿ ಸತೀಶ್ ಪೂಜಾರಿ ಅವರು ನಿರಂತರ ಹೋರಾಟ ನಡೆಸಿದ್ದರು. 1975ರ ಏಪ್ರಿಲ್ 1ರಂದು
ಉಡುಪಿ: ಉಡುಪಿ ಸಮೀಪದ ಇತಿಹಾಸ ಪ್ರಸಿದ್ಧ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 96ನೇ ಭಜನಾ ಸಪ್ತಾಹಮಹೋತ್ಸವವು ಜುಲಾಯಿ 30ರಿ೦ದ ಮೊದಲ್ಗೊ೦ಡು ಅಗಸ್ಟ್ 6ರ೦ದು ಮ೦ಗಲೋತ್ಸವವು ಕಾರ್ಯಕ್ರಮವು ಜರಗಲಿದೆ. ಈ ಬಾರಿಯ ಸಪ್ತಾಹ ಮಹೋತ್ಸವದಲ್ಲಿ ಹಲವು ಬದಲಾವಣೆಗಳಿಗಿದೆ. ದೇವರ ಪೇಟೆ ಉತ್ಸವ ಹಾಗೂ ಶ್ರೀದೇವರಿಗೆ ತೊಟ್ಟಿಲ ಪೂಜೆಯು ಇರುವುದಿಲ್ಲ. ಸಾಯ೦ಕಾಲ 6ರಿ೦ದ 8ರ ವರೆಗೆ
ಹೆಬ್ರಿ: ಜು. 23. ಜುಲೈ 20ರಂದು ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ತೂರು ಗ್ರಾಮದ (38ನೇ ಕಳ್ತೂರು) ಸಂತೆಕಟ್ಟೆಯಲ್ಲಿರುವ ಹೋಟೆಲ್ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಾಲ್ವರು ರೌಡಿಶೀಟರ್ಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತರನ್ನು ಶ್ರೀಕಾಂತ್ ಕುಲಾಲ್, ಸದಾನಂದ ಪೂಜಾರಿ, ಸಂತೋಷ್ ನಾಯಕ್ ಮತ್ತು ರಾಜ ಅಲಿಯಾಸ್ ರಾಜೇಶ್ ನಾಯಕ್ ಎಂದು
ಉಡುಪಿ:ಉಡುಪಿಯ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವ ವಿಶ್ವಾವಸು ನಾಮ ಸ೦ವತ್ಸರದ ಶ್ರಾವಣ ಶುದ್ಧ 6ಯು ದಿನಾ೦ಕ 30/07/2025ನೇ ಬುಧವಾರದಿ೦ದ ಮೊದಲ್ಗೊ೦ಡು ಶ್ರಾವಣ ಶುದ್ಧ 12ಯು 06/08/2025ನೇ ಬುಧವಾರದ ಪರ್ಯ೦ತ 125ನೇ ಭಜನಾ ಸಪ್ತಾಹ ಮಹೋತ್ಸವವು ವಾಡಿಕೆಯ೦ತೆ ಈ ಬಾರಿ ಅತೀ
ಉಡುಪಿ:ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ ಪರಶುರಾಮನ ಮೂರ್ತಿಯು ಕಂಚಿನದು ಅಲ್ಲನಕಲಿ ಎಂಬುದು ಎಲ್ಲರಿಗೂ ತಿಳಿದ ವಿಷಯ .ನಕಲಿ ಮೂರ್ತಿಯ ಸೃಷ್ಟಿಕರ್ತರೆ ಇದುವರೆಗೂ ತಾವು ಮಾಡಿದ್ದೆ ಸರಿ ಎಂಬಂತೆ ಹೇಳಿಕೆಯನ್ನು ನೀಡಿರುತ್ತಾರೆ. ಆದರೆ ತನಿಕೆಯಲ್ಲಿ ಅದು ಕಂಚಿನ ಮೂರ್ತಿಯಲ್ಲ ಎಂಬುದು ಸಾಬೀತಾಗಿರುತ್ತದೆ. ಅಂದರೆ ಇವರು ನಮಗೆ ಮೋಸ ಮಾಡಿದ್ದು ಇದು
ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಇಂದು ಉಡುಪಿ ನಗರದ ಬನ್ನಂಜೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ವಿವಿಧ ಇಲಾಖೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿ ಒಳಗೊಂಡ ಈ ವಸ್ತು ಪ್ರದರ್ಶನವನ್ನು
ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕಾಗಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥಶ್ರೀಪಾದರ ಪ್ರಥಮ ಪರ್ಯಾಯಕ್ಕೆ ಭಾನುವಾರ (ಜುಲಾಯಿ 13)ದ೦ದು ಅದ್ದೂರಿಯಿ೦ದ ಕಟ್ಟಿಗೆ ಮುಹೂರ್ತ ಕಾರ್ಯಕ್ರಮವು ಸ೦ಪನ್ನ ಗೊ೦ಡಿತು. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನೆರವೇರಿಸಲಾಗಿದ್ದು ಬಾರಿಯ ಕಟ್ಟಿಗೆ ಮುಹೂರ್ತವು ಜುಲೈ 13ರಂದು ಬೆಳಿಗ್ಗೆ 9.15 ರ
ಉಡುಪಿ: ಜು.12: ಉಡುಪಿ ನಗರಸಭೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಶೇ.7.25 ಬಡಜನರ ಕಲ್ಯಾಣ ಕಾರ್ಯಕ್ರಮದ ಯೋಜನೆಯಡಿ 76 ಮಂದಿ ಫಲಾನುಭವಿಗಳಿಗೆ ಮಂಜೂರಾದ ಟೈಲರಿಂಗ್ ಯಂತ್ರಗಳನ್ನು ಶನಿವಾರ ನಗರಸಭೆ ಸಭಾಂಗಣದಲ್ಲಿ ವಿತರಿಸಲಾಯಿತು. ಯಂತ್ರಗಳನ್ನು ವಿತರಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಫಲಾನುಭವಿಗಳಿಗೆ ವಿತರಿಸುವ ಮೂಲಕ ಆರ್ಥಿಕವಾಗಿ
ಉಡುಪಿ: ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ಗ್ರಾಮದ ಕುಂಜಾಲ್ ಜಂಕ್ಷನ್ ಬಳಿಯ ಟೂರಿಸ್ಟ್ ಟೆಂಪೋ ಸ್ಟ್ಯಾಂಡ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೋಲೀಸರು ಬಂಧಿಸಿದ್ದಾರೆ. ಉಮೇಶ ಪೂಜಾರಿ (49) ಹಂದಾಡಿ ಬಂಧಿತ ಆರೋಪಿ. ಆರೋಪಿಯು ಯಾವುದೇ ಪರವಾನಿಗೆ ಇಲ್ಲದೇ ಬ್ರಹ್ಮಾವರದ ಟಾನಿಕ್ ವೈನ್ ನಿಂದ ಮದ್ಯ