ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಚೆನ್ನೈ: ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮಂದಬೆಳಕಿನ ಕಾರಣ ಅಂತ್ಯವಾಗಿದ್ದು, ಬಾಂಗ್ಲಾದೇಶ 4 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಸೋಲಿನ ಸಂಕಷ್ಟದಲ್ಲಿ ಸಿಲುಕಿದೆ. ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ನೀಡಿರುವ 515 ರನ್ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ

ಮಂಡ್ಯ, ಸೆಪ್ಟೆಂಬರ್​ 21: ಜಿಲ್ಲೆಯ ನಾಗಮಂಗಲದಲ್ಲಿ ಗಲಭೆ ಪ್ರಕರಣಕ್ಕೆಸಂಬಂಧಿಸಿದಂತೆ ಸದ್ಯ 52 ಆರೋಪಿಗಳ ಬಂಧನವಾಗಿದೆ. ಬಂಧನದ ಭೀತಿಯಿಂದ ಕೆಲ ಯುವಕರು ಊರು ತೊರೆದಿದ್ದು, ಮನೆ ಮಂದಿ ಕಣ್ಣೀರು ಹಾಕುತ್ತಿದ್ದಾರೆ. ಗಲಭೆಗೆ ಕಾರಣವಾದ ಬದ್ರಿಕೊಪ್ಪಲು ಗ್ರಾಮದ 13 ಮಂದಿ ಅರೆಸ್ಟ್ ಆಗಿದ್ದಾರೆ. ಇದೀಗ ಬಂಧನ ಭೀತಿಯಲ್ಲಿ ಗ್ರಾಮ ತೊರೆದಿದ್ದ ಯುವಕನೋರ್ವ

ಬೆಂಗಳೂರು, ಸೆ.21: ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಕೊಲೆಯ ರೀತಿಯಲ್ಲೇ  ಬೆಂಗಳೂರಿನಲ್ಲಿಯೂ  ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ವೈಯಾಲಿಕಾವಲ್‌ನ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ಆರೋಪಿಯು ಯುವತಿಯನ್ನು ಕೊಲೆಗೈದು 30 ಕ್ಕೂ ಹೆಚ್ಚು ಪೀಸ್ ಪೀಸ್‌ ಮಾಡಿ ಫ್ರಿಜ್‌ನಲ್ಲಿ ಇಟ್ಟಿದ್ದಾನೆ. ಮೇಲ್ನೋಟಕ್ಕೆ

ಉತ್ತರ ಕನ್ನಡ, ಸೆ.21: ಜಿಲ್ಲೆಯ ಅಂಕೋಲಾ  ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜುಲೈ 16 ರಂದು ಗುಡ್ಡ ಕುಸಿದು 11 ಜನ ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದರು. ಅದರಲ್ಲಿ 8 ಜನರನ್ನು ಈಗಾಗಲೇ ಪತ್ತೆ ಮಾಡಿದ್ದು, ಇನ್ನುಳಿದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್, ಶಿರೂರಿನ ಲೋಕೇಶ್ ನಾಯ್ಕ

ಬೆಂಗಳೂರು: ಈ ಬಾರಿಯ ಮೈಸೂರು ದಸರಾವನ್ನು ಸಾಹಿತಿ ಹಂ.ಪ.ನಾಗರಾಜಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಕರ ಆಯ್ಕೆಯನ್ನು ನನ್ನ ತೀರ್ಮಾನಕ್ಕೆ ಬಿಡಲಾಗಿತ್ತು. ನಾನು ಖ್ಯಾತ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಆಯ್ಕೆ ಮಾಡಿದ್ದೇನೆ. ಅವರಿಗೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪಾಕ್ ಸೇನೆಯೇ ಸುರಕ್ಷಿತವಾಗಿಲ್ಲ. ಪ್ರತಿದಿನ ಅವರ ಮೇಲೆ ದಾಳಿಗಳು ನಡೆಯುತ್ತಿವೆ. ದಕ್ಷಿಣ ವಜೀರಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಮೇಲೆ ಮತ್ತೊಮ್ಮೆ ಭೀಕರ ದಾಳಿ ನಡೆದಿದೆ. ಈ ದಾಳಿಯಲ್ಲಿ ಆರು ಯೋಧರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನೆ ಮೇಲೆ ಉಗ್ರರ ದಾಳಿ ನಿಂತಿಲ್ಲ. ಜೂನ್ ತಿಂಗಳಿನಿಂದ ಪ್ರತಿ ತಿಂಗಳು ಪಾಕಿಸ್ತಾನದ

ದಕ್ಷಿಣ ಕನ್ನಡ, ಸೆ.20: ಮೂಡಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮದ ಓರ್ವ ವ್ಯಕ್ತಿಯಲ್ಲಿ ಕಾಲರಾ(cholera) ಸೋಂಕು ಪತ್ತೆಯಾಗಿದ್ದು, ಉಡುಪಿ ಜಿಲ್ಲೆಯ ಹೊಸ್ಮಾರುವಿನ ಹೋಟೆಲ್​ನಿಂದ ಸೊಂಕು ಸಾಮೂಹಿಕವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು ಮಾಹಿತಿ‌ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸೋಂಕು ಪತ್ತೆ ಹಿನ್ನಲೆ ದಕ್ಷಿಣ

ಬೆಂಗಳೂರು, ಸೆಪ್ಟೆಂಬರ್​ 20: ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳು ಕೊಬ್ಬು ಬಳಕೆ ಮಾಡಲಾಗುತ್ತಿತ್ತು ಅಂತ ಚಂದ್ರಬಾಬು ನಾಯ್ಡು ನೀಡಿದ್ದ ಸ್ಫೋಟಕ ಹೇಳಿಕೆ ಸದ್ಯ ದೇಶ ವ್ಯಾಪಿ ಸುದ್ದಿಯಾಗಿದೆ. ಇದೇ ವಿಷಯ ಇದೀಗ ರಾಜಕೀಯ ವಾಗ್ಯುದ್ಧಕ್ಕೂ ವೇದಿಕೆ ಆಗಿದೆ. ಈ ಮಧ್ಯೆ ಇತ್ತ ಕರ್ನಾಟಕದ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ

ಬೆಂಗಳೂರು: ಚಂದ್ರನ ಮೇಲಿನ ಬಂಡೆಗಳು ಮತ್ತು ಮಣ್ಣನ್ನು (ರೆಗೋಲಿತ್) ಭೂಮಿಗೆ ಹಿಂದಿರುಗಿಸುವ ಗುರಿಯನ್ನು ಹೊಂದಿರುವ ಚಂದ್ರಯಾನ 4 ಮಿಷನ್‌ನ ಮಾದರಿಯನ್ನು ಬೆಂಗಳೂರು ಸೈನ್ಸ್ ಎಕ್ಸ್‌ಪೋದಲ್ಲಿ ಸಾರ್ವಜನಿಕರಿಗೆ ಮೊದಲ ಬಾರಿಗೆ ಪ್ರದರ್ಶಿಸಲಾಯಿತು. ಚಂದ್ರಯಾನ 4 ಮಾದರಿಯ ಜೊತೆಗೆ, ಇಸ್ರೋ ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (NGLV) ಮತ್ತು ಹ್ಯೂಮನ್-ರೇಟೆಡ್ ಲಾಂಚ್ ವೆಹಿಕಲ್

ಗುರುಗ್ರಾಮ್: ಮಾಜಿ ಪೊಲೀಸ್ ಕಮಿಷನರ್ ಕೃಷ್ಣ ಕುಮಾರ್ ರಾವ್ ಅವರು ನ್ಯಾಯಾಂಗ ಆದೇಶದಲ್ಲಿ ತಮ್ಮ ವಿರುದ್ಧ ವ್ಯತಿರಿಕ್ತ ಹೇಳಿಕೆಗಾಗಿ ನ್ಯಾಯಾಧೀಶರ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು ಅದೇ ದಿನ ಈ ಬಗ್ಗೆ ವಿಚಾರಣೆ ಕೂಡ ನಡೆದಿತ್ತು. ನವೆಂಬರ್ 21ರಂದು