ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ರಾಯಗಡ: ಒಡಿಶಾದ ರಾಯಗಡ ಜಿಲ್ಲೆಯ ಕ್ರಷರ್ ಘಟಕದಲ್ಲಿ ಶಂಕಿತ ನಕ್ಸಲೀಯರು 9 ಯಂತ್ರಗಳಿಗೆ ಬೆಂಕಿ ಹಚ್ಚಿದ್ದು,  ಆಸ್ತಿಪಾಸ್ತಿಗಳನ್ನು ದೋಚಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.  ಶುಕ್ರವಾರ ತಡರಾತ್ರಿ ಮುನಿಗೂಡ ಪೊಲೀಸ್ ಠಾಣಾ ವ್ಯಾಪ್ತಿಯ ದೇವುಕುಪಲಿ ಬಳಿ ಈ  ಘಟನೆ ನಡೆದಿದೆ. ಕೆಲವು ಮಹಿಳಾ ಕಾರ್ಯಕರ್ತರು ಸೇರಿದಂತೆ 10 ನಕ್ಸಲೀಯರು ಕ್ರಷರ್ ಘಟಕಕ್ಕೆ ನುಗ್ಗಿದ್ದು,

ಮುಂಬೈ: ಬೈಜೂಸ್ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದ ದೀರ್ಘ ಕಾಲದ ನಂತರ ಬಿಸಿಸಿಐ ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡಿದೆ. ಆನ್‌ಲೈನ್ ಫ್ಯಾಂಟಸಿ ಗೇಮಿಂಗ್ ವೇದಿಕೆಯಾದ 'ಡ್ರೀಮ್11' ಇನ್ಮುಂದೆ ಮೂರು ವರ್ಷಗಳ ಅವಧಿಗೆ ಟೀಂ ಇಂಡಿಯಾದ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಬಿಜೆಪಿ ನಾಯಕರ ಆರೋಪ-ಪ್ರತ್ಯಾರೋಪಗಳು ಮುಂದುವರಿದಿದೆ. ನಾಯಕರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮಾಜಿ ಸಚಿವ ರೇಣುಕಾಚಾರ್ಯ ಸೇರಿದಂತೆ ಹಲವರಿಗೆ ಬಿಜೆಪಿ ಶಿಸ್ತುಪಾಲನಾ ಸಮಿತಿಯಿಂದ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಲಾಗಿದೆ.. ಇದರ ಬೆನ್ನಲ್ಲೇ ಇಂದು (ಶನಿವಾರ) ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್

ಬ್ರಹ್ಮಾವರ:ಬ್ರಹ್ಮಾವರ ಸರಕಾರಿ ಪ್ರೌಢಶಾಲೆ (ಬೋರ್ಡ್ ಹೈಸ್ಕೂಲ್) ಯಲ್ಲಿ ಜೂನ್ 30, 2023ರಂದು ಈ ಬಾರಿಯ ಯಕ್ಷಶಿಕ್ಷಣ ತರಬೇತಿಯನ್ನುಉಡುಪಿ ಶಾಸಕರಾದಯಶ್‍ಪಾಲ್ ಸುವರ್ಣಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕೆ.ರಘುಪತಿ ಭಟ್ 16 ವರ್ಷದ ಹಿಂದೆತಾವು ಶಾಸಕರಾಗಿದ್ದಾಗ ಆರಂಭಿಸಿದ ಪ್ರೌಢಶಾಲಾ ವಿದ್ಯಾರ್ಥಿಗಳ ಯಕ್ಷಶಿಕ್ಷಣದ ಈ ಅಭಿಯಾನವುಅತ್ಯಂತ ಮೌಲಿಕವಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದೆ. ಈ ಹಿನ್ನಲೆಯಲ್ಲಿ

ಮಣಿಪಾಲ:ಜು.1,ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ ವೈದ್ಯರೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನ ಮಣಿಪಾಲ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಜೂ.30 ರ ಶುಕ್ರವಾರ ತಡರಾತ್ರಿ ಸಂಭವಿಸಿದೆ. ಮೃತಪಟ್ಟ ವೈದ್ಯರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯ ಡಾ. ಸೂರ್ಯನಾರಾಯಣ ಎಂದು ಗುರುತಿಸಲಾಗಿದೆ. ಇವರು ಮೂಲತಃ ಅವರ ಬೆಂಗಳೂರಿನವರಾಗಿದ್ದಾರೆ. ಜೊತೆಗಿದ್ದ ಅವರ ಗೆಳೆಯರಾದ

ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದ್ದು, ಜುಲೈ 8 ರವರೆಗೂ ರಾಜ್ಯದ ಎಲ್ಲಾ ಶಾಲೆಗಳ ಸಾಮಾನ್ಯ ತರಗತಿಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಶುಕ್ರವಾರ ನಿರ್ಧರಿಸಿದೆ. ಆದೇಶದಲ್ಲಿ, "ರಾಜ್ಯದ ಎಲ್ಲಾ ಶಾಲೆಗಳಿಗೆ ಸಾಮಾನ್ಯ ತರಗತಿಗಳ ಪುನರಾರಂಭ ದಿನಾಂಕ 19-06-2023ರ ಆದೇಶದಂತೆ, 08-07-2023 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ". "ಶಿಕ್ಷಣ

ಮುಂಬೈ: ಚಲಿಸುತ್ತಿದ್ದ ಬಸ್'ವೊಂದಕ್ಕೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡ ಪರಿಣಾಮ 26 ಮಂದಿ ಸಜೀವ ದಹನವಾಗಿ, 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್ ಎಕ್ಸ್​​ಪ್ರೆಸ್ ಹೆದ್ದಾರಿಯಲ್ಲಿ ಶನಿವಾರ ನಡೆದಿದೆ. ಬುಲ್ಧಾನ ಜಿಲ್ಲೆಯ ಸಿಂಧಖೇದರಾಜ ಬಳಿಯ ಪಿಂಪಲಖುಟಾ ಗ್ರಾಮದ ಬಳಿ ಸಮೃದ್ಧಿ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಈ

ಬೆಂಗಳೂರು: ಶಾಲಾ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ನಗರದ ಪಾರ್ವತಿಪುರದಲ್ಲಿರುವ ಮಿಲೇನಿಯಂ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಸಾರಾ ಮನೆಯಲ್ಲಿ ವೇಲ್ ನಿಂದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಜೂನ್ 20ರಂದು ಶಾಲೆಯಿಂದ ಮನೆಗೆ ಬಂದ ನಂತರ ಬಾಲಕಿ ಖಿನ್ನತೆಗೆ

ಗುವಾಹಟಿ: ಮಣಿಪುರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ರಾಜೀನಾಮೆ ನೀಡುವುದಿಲ್ಲ ಎಂದು ಸಿಎಂ ಯು-ಟರ್ನ್ ಹೊಡೆದಿದ್ದಾರೆ. ಮಣಿಪುರ ಸಿಎಂ ಗೃಹ ಕಚೇರಿಯ ಹೊರಭಾಗದಲ್ಲಿ ಹೈಡ್ರಾಮ ನಡೆದಿದ್ದು, ನೂರಾರು ಮಹಿಳೆಯರು ರಸ್ತೆ ತಡೆದಿದ್ದಾರೆ. ಮಧ್ಯಾಹ್ನ 1 ಗಂಟೆಗೆ ರಾಜಭವನಕ್ಕೆ ತೆರಳಬೇಕಿದ್ದ ಸಿಎಂ

ಹೊಸಪೇಟೆ: ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ಬ್ರೀಡ್ಜ್ ಬಳಿ ಎರಡು ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ವೇಗವಾಗಿ ಬಂದ ಲಾರಿ ಎರಡು ಆಟೋಗಳಿಗೆ ಡಿಕ್ಕಿ ಹೊಡೆದಿದ್ದು ಆಟೋದಲ್ಲಿದ್ದ ಐವರು ಮಹಿಳೆಯರು ಇಬ್ಬರು ಪುರುಷರು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಘಟನೆಯಲ್ಲಿ