ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ 10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದೆ...
ಉಡುಪಿ: ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗಿ ಬಾಲಕ ಸಾವು; ಕೊನೆ ಕ್ಷಣದ ವೀಡಿಯೋ ಸೆರೆ
ಉಡುಪಿ, ಏ.12: ಜಿಲ್ಲೆಯ ಕುಂದಾಪುರ ತಾಲೂಕಿನ ಹೆಂಗವಳ್ಳಿಯ ಶಂಕರನಾರಾಯಣದ ಟಿನ್ ಟಾನ್ ಎಡ್ವೆಂಚರ್ಸ್ ರೆಸಾರ್ಟ್‌ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ನಿನ್ನೆ(ಏ.11) ಮಧ್ಯಾಹ್ನ ರೆಸಾರ್ಟ್‌ನ ಈಜುಕೊಳದಲ್ಲಿ ಮುಳುಗಿ ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಹೂಡೆಯ ಮೊಹಮ್ಮದ್ ಅಝೀಝ್ (10) ಮೃತ ಬಾಲಕ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಹತ್ತಾರು ಜನ ಇದ್ದರೂ ಕೂಡ ಸಾವಿನಿಂದ ಪಾರಾಗಲು ಸಾಧ್ಯವಾಗಿಲ್ಲ. ಹೌದು, ಬಾಲಕ ಮುಳುಗುತ್ತಿದ್ದರೂ ಹತ್ತಿರದಲ್ಲಿದ್ದ ಯಾರೊಬ್ಬರಿಗೂ ಗೊತ್ತಾಗಿರಲಿಲ್ಲ. ಇನ್ನು ಈದ್ ಹಬ್ಬದ ರಜೆ ಪ್ರಯುಕ್ತ ಕುಟುಂಬದ ಜೊತೆಗೆ ಅಝೀಝ್ ತೆರಳಿದ್ದ. ಅಝೀಝ್ ಕೊನೆಯ ಕ್ಷಣದ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.