ಉಡುಪಿ: ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿ ವಾಡಿಕೆಯ೦ತೆ ಕಾರ್ತಿಕಮಾಸದಲ್ಲಿ ನಡೆಯಲಿರುವ ಲಕ್ಷದೀಪೋತ್ಸವವು ನವೆ೦ಬರ್ 7ರ ಶುಕ್ರವಾರದ೦ದು ಜರಗಲಿದೆ. ವನಪೂಜೆ,ಮಧ್ಯಾಹ್ನ ಪೂಜೆ,ವನಭೋಜನ,ರಾತ್ರಿಪೂಜೆ, ಕೆರೆಉತ್ಸವದೊ೦ದಿಗೆ ಪೇಟೆ ಉತ್ಸವದೊ೦ದಿಗೆ ಕಟ್ಟೆ ಪೂಜೆ,ರಾತ್ರಿ ಬೀಡಿನಗುಡ್ಡೆಯಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಲಿದೆ.

ಶ್ರೀ ಶಿರೂರು ಮೂಲ ಮಠದಲ್ಲಿ ರಾಮನವಮಿಯ ಸ೦ಭ್ರಮ-ಗಿರಿಬಳಗ (ರಿ) ಕುಂಜಾರುಗಿರಿ ಇದರ ಸದಸ್ಯರಿಂದ “ಛತ್ರಪತಿ ಶಿವಾಜಿ” ಐತಿಹಾಸಿಕ ನಾಟಕ

ಉಡುಪಿ:ಶ್ರೀ ಶಿರೂರು ಮೂಲ ಮಠದಲ್ಲಿ ರಾಮನವಮಿಯಂದು ನಡೆಯಲಿರುವ ರಥೋತ್ಸವದ ಪ್ರಯುಕ್ತ ಋಕ್ಸಂಹಿತಾ ಯಾಗ ಸಹಿತ ಹಲವಾರು ಧಾರ್ಮಿಕ ಕಾರ್ಯಕ್ರಮಗಳು, ಹಲವಾರು ಪ್ರಸಿದ್ಧ ಕಲಾವಿದರಿಂದ ಮತ್ತು ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರ 9 ದಿನಗಳಲ್ಲಿ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯುತ್ತಿವೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಿರಿಬಳಗ (ರಿ) ಕುಂಜಾರುಗಿರಿ ಇದರ ಸದಸ್ಯರಿಂದ “ಛತ್ರಪತಿ ಶಿವಾಜಿ” ಐತಿಹಾಸಿಕ ನಾಟಕ ನಡೆಯಿತು.

No Comments

Leave A Comment