.......ಇ೦ದು ಮಕರಸ೦ಕ್ರಾ೦ತಿ ನಾಡಿನ ಸಮಸ್ತ ಜನತೆಗೆ,ನಮ್ಮ ಜಾಹೀರಾತುದಾರರಿಗೆ , ಓದುಗರಿಗೆ, ಅಭಿಮಾನಿಗಳಿಗೆ :ಮಕರಸ೦ಕ್ರಾ೦ತಿ?"ಯ ಶುಭಾಶಯಗಳು......

ಬೆಂಗಳೂರು :  ಜಾಸ್ತಿ ಮೊಬೈಲ್ ನೋಡದೆ ಓದಿನ ಕಡೆ ಗಮನಕೊಡು ಎಂದು ಪೋಷಕರು ಗದರಿದಕ್ಕೆ, 13 ವರ್ಷದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನನಗರದಲ್ಲಿ ನಡೆದಿದೆ. ಧ್ರುವ ಆತ್ಮಹತ್ಯೆಗೆ ಶರಣಾದ ಬಾಲಕ. ಈತ 9 ವರ್ಷದ ತಂಗಿಯ ಮುಂದೆಯೇ ಉಡದಾರದಿಂದ

ಬೆಂಗಳೂರು, ಜನವರಿ 29: ಮೈಸೂರು ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವಿನ ಜಟಾಪಟಿ ಮುಂದುವರೆದಿದ್ದು, ಬೆಂಗಳೂರು ಅರಮನೆ ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ​ ಒಪ್ಪಿಗೆ ಸೂಚಿಸಿದ್ದಾರೆ. ಆ ಮೂಲಕ 472 ಎಕರೆ ಮತ್ತು 16 ಗುಂಟೆ ಬೆಂಗಳೂರು ಅರಮನೆಯ ಭೂಮಿ ಬಳಕೆ ಮತ್ತು

ಬೆಂಗಳೂರು: ನಗರದ ಶ್ರೀರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೆಡಿಎಸ್ ಪ್ರಧಾನ ಕಚೇರಿ ಬಳಿಯ ಜಕ್ಕರಾಯನಕೆರೆ ಮೈದಾನದಲ್ಲಿ ನಿಲುಗಡೆ ಮಾಡಲಾಗಿದ್ದ ಸುಮಾರು 150 ಜಪ್ತಿ ವಾಹನಗಳಿಗೆ ಬುಧವಾರ ಬೆಳಗ್ಗೆ ಬೆಂಕಿ ಹೊತ್ತುಕೊಂಡಿದ್ದು, ಸುಟ್ಟು ಕರಕಲಾಗಿವೆ. ಕಳ್ಳತನ ಹಾಗೂ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿಕೊಂಡ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ವಾಷಿಂಗ್ಟನ್: ಪಿಎಸ್ ಎ ನಿರ್ವಹಣೆಯ ಅಮೆರಿಕನ್ ಏರ್ಲೈನ್ಸ್ ವಾಣಿಜ್ಯ ವಿಮಾನ ನಿನ್ನೆ ರಾತ್ರಿ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಿಲಿಟರಿ ಹೆಲಿಕಾಪ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪೊಟೊಮ್ಯಾಕ್ ನದಿಗೆ ಬಿದ್ದು ವಿಮಾನದಲ್ಲಿದ್ದ ಎಲ್ಲಾ 64 ಮಂದಿ ಮೃತಪಟ್ಟಿರುವ ಶಂಕೆಯಿದೆ, ಈಗಾಗಲೇ ಇಬ್ಬರ ಮೃತದೇಹಗಳನ್ನು ರಕ್ಷಣಾ ಕಾರ್ಯ ತಂಡ ಹೊರತೆಗೆದಿದೆ. ನದಿಯಿಂದ

"ಧರ್ಮಾಂಧ ಮಾರಾಟಗಾರ" ಕರುವಿನ ಬಾಲವನ್ನು ಕತ್ತರಿಸಿದ್ದಾನೆ ಎಂಬ ಸುಳ್ಳು ಮಾಹಿತಿಯನ್ನು ಹರಡಿದ ವ್ಯಕ್ತಿಯ ವಿರುದ್ಧ ಕೋಟಾ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಜನವರಿ 30ರಂದು ಕೋಟಾ ಪಿಎಸ್‌ಐ ರಾಘವೇಂದ್ರ ಸಿ ಅವರು ದಾಖಲಿಸಿದ ದೂರಿನ ಪ್ರಕಾರ, ಕರ್ತವ್ಯದಲ್ಲಿದ್ದಾಗ, ಅವರು ಸಾಮಾಜಿಕ ಮಾಧ್ಯಮ ಮತ್ತು ಇತರ ವೇದಿಕೆಗಳಲ್ಲಿ ದಾರಿತಪ್ಪಿಸುವ ಸಂದೇಶ

ಮಂಗಳೂರು, ಜನವರಿ 30: ಮಣ್ಣಿನಡಿ ಹುದುಗಿ ಹೋಗಿದ್ದ 300 ವರ್ಷಗಳ ಹಳೆಯ ದೈವಸ್ಥಾನವೊಂದು ಪತ್ತೆಯಾಗಿದ್ದು, ತುಳುನಾಡಿನ ಕಾರ್ಣಿಕ ದೈವದ ಇರುವಿಕೆ ಕಂಡು ಗ್ರಾಮಸ್ಥರು ಬೆಚ್ಚಿಬೀಳುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ನೀರುಮಾರ್ಗದ ಪೆದಮಲೆ ಗ್ರಾಮದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದ್ದು, ದೈವದ ಮುನಿಸಿನಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಪ್ರಶ್ನಾಚಿಂತನೆಯಲ್ಲಿ ದೈವಸ್ಥಾನದ ಸುಳಿವು

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಕಾಲ್ತುಳಿತ ಉಂಟಾಗಿ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದ ಬಳಿಕ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ವಿವಿಐಪಿ ಪಾಸ್​ಗಳನ್ನು ರದ್ದುಗೊಳಿಸಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ ಐದು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ. ಇನ್ನುಮುಂದೆ ಯಾವುದೇ ಬಗೆಯ ವಾಹನಗಳನ್ನು ಒಳಗೆ ಬಿಡುವುದಿಲ್ಲ.

ಉಡುಪಿ:ಉಡುಪಿ ಕೋ ಆಪರೇಟಿವ್ ಟೌನ್ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆಗೆ ಈ ಹಿಂದಿನ ಅಧ್ಯಕ್ಷರಾಗಿದ್ದ ಎಚ್.ಜಯಪ್ರಕಾಶ್ ಕೆದ್ಲಾಯರ ತಂಡದ ಸದಸ್ಯರಾದ ಪ್ರಹ್ಲಾದ್ ಬಲ್ಲಾಳ್ ಎನ್ˌ ಭಾಸ್ಕರ ರಾವ್ ಕಿದಿಯೂರುˌ ಮುರಳೀಧರ ಭಟ್ ಕೆ, ರವೀಂದ್ರ ಪಿ.ಎನ್ˌ ಪಿ. ರಾಘವೇಂದ್ರ ಭಟ್ ˌ ಪಿ. ಶ್ರೀಪತಿ ರಾವ್ˌ ಸೀತಾರಾಮ ಕೇಕುಡˌ

ಉಡುಪಿಯ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ಒ೦ದಾದ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವು ವಿಜೃ೦ಭಣೆಯಿ೦ದ ಜರಗಲಿದೆ. ಈ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ

ಮೈಸೂರು, (ಜನವರಿ 28): ಮುಡಾ ಸೈಟ್ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಿದೆ. ಈವರೆಗಿನ ತನಿಖೆಯ ವರದಿಯನ್ನ ಲೋಕಾಯುಕ್ತ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದ್ದಾರೆ. ಆದ್ರೆ, ಲೋಕಾಯುಕ್ತ ತನಿಖೆಗೆ ಆಕ್ಷೇಪ ವ್ಯಕ್ತಪಡಿಸಿರೋ ದೂರುದಾರ ಸ್ನೇಹಮಯಿ ಕೃಷ್ಣ, ಪ್ರಕರಣವನ್ನ ಸಿಬಿಐಗೆ ನೀಡಬೇಕೆಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.