ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ದಾವಣಗೆರೆ: ಕುರುಕಲು ತಿಂಡಿ ಪ್ಯಾಕೆಟ್ ನಲ್ಲಿದ್ದ ಆಟಿಕೆ ನುಂಗಿ ನಾಲ್ಕು ವರ್ಷದ ಹೆಣ್ಣು ಮಗು ಸಾವು!

ದಾವಣಗೆರೆ: ಕುರುಕಲು ತಿಂಡಿ ಪ್ಯಾಕೆಟ್ ನಲ್ಲಿದ್ದ ಆಟಿಕೆ ನುಂಗಿ ನಾಲ್ಕು ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.

ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಏರಿಯಾದ ಅಲಿಯಾ ಶೇಕ್ ಮೃತಪಟ್ಟ ದುರ್ದೈವಿ ಮಗು. ಮಗು ತನ್ನ ಮನೆಯ ಪಕ್ಕದ ಅಂಗಡಿಯಿಂದ ಕುರುಕಲು ತಿಂಡಿಯ ಪ್ಯಾಕೆಟ್ ಖರೀದಿಸಿ ತಿನ್ನುತ್ತಿತ್ತು.

ಆ ವೇಳೆ ತಿಂಡಿಯೊಂದಿಗೆ ಪ್ಯಾಕೆಟ್ ಒಳಗಿದ್ದ ಸಣ್ಣ ಪ್ಲಾಸ್ಟಿಕ್ ಆಟಿಕೆಯನ್ನು (ಬಾಲ್) ಆಹಾರವೆಂದು ಭಾವಿಸಿ ನುಂಗಿದೆ.

ಆಟಿಕೆ ಗಂಟಲಿನಲ್ಲಿ ಸಿಲುಕಿಕೊಂಡಿದ್ದರಿಂದ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡು ಅಸ್ವಸ್ಥಗೊಂಡಿದೆ. ಪೋಷಕರು ತಕ್ಷಣವೇ ಮಗುವನ್ನು ಚನ್ನಗಿರಿ ತಾಲೂಕು ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ..

No Comments

Leave A Comment