ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಉಡುಪಿ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಇ೦ದು ದೀಪೋತ್ಸವದ ಸ೦ಭ್ರಮ…

ಉಡುಪಿ:ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ವರ್ಷಂಪ್ರತಿ ವಾಡಿಕೆಯಂತೆ ಜರಗಲಿರುವ ಕಾರ್ತಿಕ ದೀಪೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊ೦ದಿಗೆ ಈ ವರ್ಷದ ತಾ 26.11.2026 ನೇ ಗುರುವಾರ ದಿವಸ ವಿಜೃಂಭಣೆಯಿಂದ ಜರಗುತ್ತಿದೆ.

ಕಾರ್ಯಕ್ರಮಗಳ ವಿವರ:-ಇ೦ದು ಗುರುವಾರದ೦ದು ಬೆಳಿಗ್ಗೆ ಗಂಟೆ 10.45 ಕ್ಕೆ ಪ್ರಾರ್ಥನೆಯ ನ೦ತರ ಶ್ರೀದೇವರ ಸವಾರಿ ವನಕ್ಕೆ ಹೊರಟಿತು. ಅಲ್ಲಿ ಶ್ರೀದೇವರಿಗೆ ಪ೦ಚಾಮೃತ ಅಭಿಷೇಕವನ್ನು ನೆರವೇರಿಸಲಾಯಿತು.

ರಾತ್ರಿ ಗಂಟೆ 7.00 ಕ್ಕೆ ರಾತ್ರಿ ಪೂಜೆ, ನಂತರ ಕೆರೆ ಉತ್ಸವ, ಬಳಿಕ ಪೇಟೆ ಉತ್ಸವ ,ಸುಡುಮದ್ದು ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.

ತಾ 27.11.2026 ನೇ ಶುಕ್ರವಾರ ಅವಚ್ಛತೋತ್ಸವದ ವಿವಿಧ ಧಾರ್ಮಿಕ ಕಾರ್ಯಕಲಾಪಗಳು ಜರಗಲಿದೆ. ಬೆಳಿಗ್ಗೆ ಗಂಟೆ 10.30 ಕ್ಕೆ ಶ್ರೀದೇವರ ಅವಧೃತೋತ್ಸವದ ಪೇಟೆ ಉತ್ಸವ ನಂತರ ಶ್ರೀದೇವಳಕ್ಕೆ ಆಗಮನ, ದ್ವಾದಶ ಕಲತ ಅಭಿಷೇಕ, ಸಾನಿಧ್ಯ ಹವನ, ಸಾಯಂಕಾಲ ಗಂಟೆ 5.00ಕ್ಕೆ ಮಹಾಪೂಜೆ, ಸಾಯಂಕಾಲ ಗಂಟೆ 5.00 ರಿಂದ 8.00 ಸಮಾಜಬಾಂಧವರಿಗೆ ಮಹಾ ಸಮಾರಾಧನೆ, ರಾತ್ರಿ ಗಂಟೆ 8.00 ಕ್ಕೆ ರಾತ್ರಿ ಪೂಜೆಯು ಜರಗಲಿದೆ.

No Comments

Leave A Comment