ಅನಾಮಧೇಯ ಭಕ್ತನಿಂದ ತಿರುಪತಿ ತಿಮ್ಮಪ್ಪನಿಗೆ ದಾಖಲೆಯ 121 ಕೆಜಿ ಚಿನ್ನ ಕಾಣಿಕೆ!
ತಿರುಪತಿ: ಅನಾಮಧೇಯ ಅನಿವಾಸಿ ಭಾರತೀಯ(ಎನ್‌ಆರ್‌ಐ) ಭಕ್ತರೊಬ್ಬರು ತಿರುಮಲ ತಿರುಪತಿ ದೇವಸ್ಥಾನ(ಟಿಟಿಡಿ)ಕ್ಕೆ ದಾಖಲೆಯ 121 ಕೆಜಿ ಚಿನ್ನದ ಆಭರಣಗಳನ್ನು ಕಾಣಿಕೆಯಾಗಿ ನೀಡಲು ಸಜ್ಜಾಗಿದ್ದಾರೆ.
ಸುಮಾರು 160 ಕೋಟಿಯಿಂದ 206 ಕೋಟಿ ರೂಪಾಯಿ ಮೌಲ್ಯದ ಈ ಚಿನ್ನದ ಆಭರಣಗಳನ್ನು ಗುರುವಾರ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಟಿಟಿಡಿಗೆ ಹಸ್ತಾಂತರಿಸಲಾಗುತ್ತಿದೆ.ಈ ಬೃಹತ್ ಕಾಣಿಕೆಯಲ್ಲಿ ಒಟ್ಟು 45 ಚಿನ್ನದ ಆಭರಣಗಳಿದ್ದು, ಅವುಗಳನ್ನು ಒಂಬತ್ತು ಪ್ರತ್ಯೇಕ ಸೆಟ್‌ಗಳಾಗಿ ಸಿದ್ಧಪಡಿಸಲಾಗಿದೆ. ಮೂಲ ವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ಅಲಂಕರಿಸಲು ಅನುಕೂಲವಾಗುವಂತೆ ವಿಶೇಷ ವಿನ್ಯಾಸದಲ್ಲಿ ಆಭರಣಗಳನ್ನು ತಯಾರಿಸಲಾಗಿದೆ. ಶ್ರೀವಾರಿ ಕಿರೀಟ, ಪದ್ಮಪಾದಗಳು ಸೇರಿದಂತೆ ಹಲವು ಸಾಂಪ್ರದಾಯಿಕ ಆಭರಣಗಳು ಈ ಸಂಗ್ರಹದಲ್ಲಿವೆ.
ಈ ಆಭರಣಗಳನ್ನು ಚೆನ್ನೈ ಮೂಲದ ಜಿಆರ್‌ಟಿ ಜ್ಯುವೆಲ್ಲರ್ಸ್‌ನಲ್ಲಿ ವಿಶೇಷವಾಗಿ ತಯಾರಿಸಲಾಗಿದೆ. ಅವುಗಳನ್ನು ಬಿಗಿ ಭದ್ರತೆಯಲ್ಲಿ ತಿರುಮಲಕ್ಕೆ ತರಲಾಗಿದೆ. ವಿಶೇಷವಾಗಿ ನಿರ್ಮಿಸಲಾದ ಪ್ಲೈವುಡ್ ಪ್ರದರ್ಶನ ರ್ಯಾಕ್‌ಗಳನ್ನು ಬಳಸಿಕೊಂಡು ರಂಗನಾಯಕುಳ ಮಂಟಪದಲ್ಲಿ ಈ ಆಭರಣಗಳನ್ನು ಪ್ರದರ್ಶಿಸಲು ಟಿಟಿಡಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.