ನ.26ಮತ್ತು 27ರ೦ದು ಉಡುಪಿ ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ
ಉಡುಪಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ವರ್ಷಂಪ್ರತಿ ವಾಡಿಕೆಯಂತೆ ಜರಗಲಿರುವ ಕಾರ್ತಿಕ ದೀಪೋತ್ಸವದ ವಿವಿಧ ಧಾರ್ಮಿಕ ಕಾರ್ಯಕಲಾಪಗಳು ಈ ವರ್ಷ ತಾ 26.11.2026 ನೇ ಗುರುವಾರ ದಿವಸ ವಿಜೃಂಭಣೆಯಿಂದ ಜರಗಲಿರುವುದು.
ಕಾರ್ಯಕ್ರಮಗಳ ವಿವರ:-
ಬೆಳಿಗ್ಗೆ ಗಂಟೆ 10.45 ಕ್ಕೆ ಪ್ರಾರ್ಥನೆ; ನಂತರ ಶ್ರೀದೇವರ ಸವಾರಿ ವನಕ್ಕೆ ಹೊರಡುವುದು. ಮಧ್ಯಾಹ್ನ ಗಂಟೆ 2.00 : ಸಮಾರಾಧನೆ 5.00ರಿ೦ದ 8.00ವರೆಗೆ
ರಾತ್ರಿ ಗಂಟೆ 7.00 ಕ್ಕೆ ರಾತ್ರಿ ಪೂಜೆ, ನಂತರ ಕೆರೆ ಉತ್ಸವ, ಬಳಿಕ ಪೇಟೆ ಉತ್ಸವ ,ಸುಡುಮದ್ದು ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳು ಜರಗಲಿರುವುದು.
ತಾ 27.11.2026 ನೇ ಶುಕ್ರವಾರ ಅವಚ್ಛತೋತ್ಸವದ ವಿವಿಧ ಧಾರ್ಮಿಕ ಕಾರ್ಯಕಲಾಪಗಳು ಜರಗಲಿರುವುದು. ಬೆಳಿಗ್ಗೆ ಗಂಟೆ 10.30 ಕ್ಕೆ ಶ್ರೀದೇವರ ಅವಧೃತೋತ್ಸವದ ಪೇಟೆ ಉತ್ಸವ ನಂತರ ಶ್ರೀದೇವಳಕ್ಕೆ ಆಗಮನ, ದ್ವಾದಶ ಕಲತ ಅಭಿಷೇಕ, ಸಾನಿಧ್ಯ ಹವನ, ಸಾಯಂಕಾಲ ಗಂಟೆ 5.00ಕ್ಕೆ ಮಹಾಪೂಜೆ, ಸಾಯಂಕಾಲ ಗಂಟೆ 5.00 ರಿಂದ 8.00 ಸಮಾಜಬಾಂಧವರಿಗೆ ಮಹಾ ಸಮಾರಾಧನೆ, ರಾತ್ರಿ ಗಂಟೆ 8.00 ಕ್ಕೆ ರಾತ್ರಿ ಪೂಜೆ. ಎಂದು ಶ್ರೀ ದೇವಸ್ಥಾನದ ಪ್ರಕಟಣೆ ತಿಳಿಸಿದೆ.