ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಿಶ್ವರೂಪದರ್ಶನ ಸ೦ಪನ್ನ…
ಉಡುಪಿಯ ತೆ೦ಕಪೇಟೆಯಲ್ಲಿ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳ ಜ್ಯೋತಿಯ ಬೆಳಕಿನಲ್ಲಿ “ವಿಶ್ವರೂಪ ದರ್ಶನ” ನೆಡೆಯಿತು.
ಪಶ್ಚಿಮ ಜಾಗರ ಪೂಜೆಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದರು ಉತ್ಥಾನ ದ್ವಾದಶೀ ತುಳಸೀ ಪೂಜೆ ಪರ್ವ ಕಾಲದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ ಹೂಗಳಿಂದ ಹಾಗೂ ರಂಗೋಲಿಯಲ್ಲಿ ಮೂಡಿ ಬಂದ ಬಣ್ಣದ ಚಿತ್ತಾರ ರೊಪದಲ್ಲಿ ರಾಮಾಯಣ , ಜಯದುರ್ಗ ಪರಮೇಶ್ವರಿ , ವೆಂಕಟರಮಣ , ಶಂಖ , ಚಕ್ರ , ಶ್ರೀಲಕ್ಷ್ಮೀ , ಇಡುಗುಂಜಿ ಮಹಾಗಣಪತಿ , ಶ್ರೀರಾಮ , ಹರಿ ವಿಠಲ್ , ಶ್ರೀನಿವಾಸ ದೇವರು , ಗೀತೋಪದೇಶ , ಶ್ರೀವಿಷ್ಣುವಿನ ಅವತಾರ , ಮುಂತಾದ ದೇವರ ಚಿತ್ತಾರ ಭಕ್ತರ ಮನ ಸೆಳೆಯಿತು , ಪ್ರಧಾನ ಅರ್ಚಕರಾದ ದಯಾಘನ್ ಭಟ್ ಮಹಾ ಪೂಜೆ ನೆರವೇರಿಸಿದರು.
ದೇವಳದ ಧರ್ಮದರ್ಶಿ ಗುಜ್ಜಾಡಿ ಪ್ರಭಾಕರ ನಾಯಕ್ , ಸೇವಾದಾರ ಗೋಕುಲದಾಸ ಭಟ್ , ಆಡಳಿತ ಮಂಡಳಿಯ ಸದಸ್ಯರು , ಜಿ ಎಸ್ ಬಿ ಯುವಕ , ಜಿ ಎಸ್ ಬಿ ಮಹಿಳಾ ಮಂಡಳಿಯ ಸದಸ್ಯರು , ಸ್ವಯಂ ಸೇವಕರು ಸಹಕರಿಸಿದರು.
ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಅಹೋ ರಾತ್ರಿ ಭಜನಾ ಕಾರ್ಯಕ್ರಮ ಜರಗಿತು
ಶ್ರೀ ದೇವರ ಸನ್ನಿಧಿಯಲ್ಲಿ ಸುಪ್ರಭಾತ , ಭಜನಾ ಕಾರ್ಯಕ್ರಮ , ದೀಪಾರಾಧನೆ , ಕಾಕಡ ಆರತಿ , ಪ್ರಸಾದ್ ವಿತರಣೆ ನೆಡೆಯಿತು.