ಬೆಂಗಳೂರಿನಲ್ಲಿ ತುಳು ಚಿತ್ರ ನಿರ್ದೇಶಕ ಸೂರಜ್ ಬೋಳಾರ್ ನಿಧನ
ದಿವಂಗತ ಆನಂದ ಬೋಳಾರ್ ಅವರ ಪುತ್ರ, ತುಳು ಚಿತ್ರ ನಿರ್ದೇಶಕ ಸೂರಜ್ ಬೋಳಾರ್ ಅವರು ಭಾನುವಾರ ನಿಧನರಾಗಿದ್ದಾರೆ.
‘ಪತ್ತೀಸ್ ಗ್ಯಾಂಗ್’ ಮತ್ತು ‘ರಾಹುಕಾಲ ಗುಳಿಗಕಾಲ’ ಎಂಬ ಎರಡು ತುಳು ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಸೂರಜ್ ಬೋಳಾರ್ ಕರಾವಳಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಹಠಾತ್ ನಿಧನವು ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳಿಗೆ ತೀವ್ರ ದುಃಖ ತಂದಿದೆ.
ಕುಟುಂಬಸ್ಥರು, ಸ್ನೇಹಿತರು ಮತ್ತು ಆಪ್ತರು ಸೋಮವಾರ (ನವೆಂಬರ್ 23) ಬೆಳಗ್ಗೆ 10 ರಿಂದ 11 ಗಂಟೆಯವರೆಗೆ ಆನಂದ ನಿವಾಸ, ನಂ. 57, ಅಂದ್ರಹಳ್ಳಿ ಸರ್ಕಲ್ ಹತ್ತಿರ, ಅಂದ್ರಹಳ್ಳಿ ಮುಖ್ಯರಸ್ತೆ, ಬೆಂಗಳೂರು – 560091 ಈ ವಿಳಾಸದಲ್ಲಿ ಅಂತಿಮ ದರ್ಶನ ಪಡೆಯಬಹುದು.
ಅವರ ಅಂತ್ಯಕ್ರಿಯೆಯು ಬೆಂಗಳೂರಿನ ಕಾಮಾಕ್ಷಿಪಾಳ್ಯದ ಔಟರ್ ರಿಂಗ್ ರೋಡ್‌ನಲ್ಲಿರುವ ಸುಮನಹಳ್ಳಿ ಚಿತಾಗಾರದಲ್ಲಿ ನಡೆಯಲಿದೆ.