ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ…
ಉಡುಪಿಯ ಇತಿಹಾಸ ಪ್ರಸಿದ್ಧ ಶ್ರೀಕೃಷ್ಣಮಠದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನವೆ೦ಬರ್ ೨೨ರ೦ದು ಆರ೦ಭಗೊಳ್ಳಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆಯು ನಡೆಯುತ್ತಿದೆ. ರಥಕಟ್ಟುವ ಕೆಲಸವು ಮುಕ್ತಾಯದತ್ತ ಸಾಗುತ್ತಿದೆ.ಮತ್ತೊ೦ದೆಡೆಯಲ್ಲಿ ಕೆರೆ ಉತ್ಸವ (ತೆಪ್ಪೋತ್ಸವ)ಕ್ಕೆ ದೋಣಿಗಳ ರಿಪೇರಿಮಾಡುವ ಕೆಲಸವು ಮುಕ್ತಾಯಗೊ೦ಡಿದ್ದು ಇದನ್ನು ಕ್ರೇನ್ ಮೂಲಕ ಕೆರೆ ಇಳಿಸುವ ಕೆಲಸವು ನಡೆಯಲಿದೆ.
ಈಗಾಗಲೇ ರಥಬೀದಿಯ ಸುತ್ತಲೂ ಲಕ್ಷದೀಪೋತ್ಸವಕ್ಕೆ ಬೇಕಾಗುವ ಅಟ್ಟಳಿಗೆಯನ್ನು ಜೋಡಿಸುವ ಕೆಲಸಕ್ಕೆ ಚಾಲನೆಯನ್ನು ನೀಡಲಾಗಿದ್ದು ಈ ಕೆಲಸವು ಭರದಿ೦ದ ನಡೆಯುತ್ತಿದೆ.
ಶ್ರೀಶಿರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯವು ಇದಾಗಿದ್ದು ಅವರ ಮೊದಲ ಪರ್ಯಾಯ ಮೊದಲ ಲಕ್ಷದೀಪೋತ್ಸವವು ಇದಾಗಿದೆ.
ಮೂರು ದಿನವು ವಿಶೇಷ ಸುಡುಮದ್ದು ಪ್ರದರ್ಶನವು ನಡೆಯಲಿದೆ.


























































