ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ಉತ್ಥಾನ ದ್ವಾದಶಿಯಿ೦ದ ಲಕ್ಷದೀಪೋತ್ಸವ ಆರ೦ಭ.....ನವೆ೦ಬರ್ 26ರ ಗುರುವಾರ ಮತ್ತು 27ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಿದೆ....

ಮೈಸೂರು: ನಂಜನಗೂಡು ಸಿದ್ದೇಶ್ವರ ಜಾತ್ರೆ ಮೆರವಣಿಗೆ ವೇಳೆ ಗಲಾಟೆ, ಕಲ್ಲುತೂರಾಟ

ಮೈಸೂರು: ನ.12: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದೆ. ಪಟಾಕಿ ಸಿಡಿಸುವ ವಿಚಾರಕ್ಕೆ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಘರ್ಷಣೆಗೆ ಕಾರಣವಾಗಿದೆ. ಬೆಟ್ಟದಿಂದ ಆಗಮಿಸುತ್ತಿದ್ದ ಸಿದ್ದೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಕಲ್ಲುತೂರಾಟದಿಂದ ಆನಂದ್, ಭರತ್, ಅಭಿ ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿವೆ. ಘರ್ಷಣೆಯ ಪರಿಣಾಮವಾಗಿ, ಸಾಗುತ್ತಿದ್ದ ರಥೋತ್ಸವವು ಅರ್ಧಕ್ಕೆ ನಿಂತುಹೋಗಿದೆ.

ಗ್ರಾಮದ ಸಮುದಾಯ ಅರಳಿಮರದ ಹತ್ತಿರ ರಥ ಬಂದಾಗ ಪಟಾಕಿ ಸಿಡಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿ, ಅದು ದೊಡ್ಡ ಗಲಾಟೆಗೆ ಕಾರಣವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಕಾರಣ, ಜಾತ್ರಾ ಮಹೋತ್ಸವಕ್ಕೆ ಅಡಚಣೆಯಾಯಿತು. ಘಟನೆ ನಡೆದ ನಂತರ ಕಾರ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಈ ಘಟನೆಯಿಂದಾಗಿ ಜಾತ್ರೆಯ ಸಂಭ್ರಮಕ್ಕೆ ಅಡ್ಡಿಯುಂಟಾಯಿತು.

No Comments

Leave A Comment