.....ದೇಶದೆಲ್ಲೆಡೆಯಲ್ಲಿ ಸ೦ಭ್ರಮದ ದೀಪಾವಳಿ ಹಬ್ಬ...ಗೂಡುದೀಪ,ಸಿಹಿತಿ೦ಡಿ,ಹೊಸಬಟ್ಟೆ ಯ ಖರೀದಿಯಲ್ಲಿ ನಾಡಿನ ಜನತೆ-ಎಲ್ಲೆಡೆಯಲ್ಲಿ ಪಟಾಕಿಯ ಸದ್ದು.......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ,ಓದುಗರಿ ಬೆಳಕಿನ ಹಬ್ಬ ದೀಪಾವಳಿಯು ಶುಭವನ್ನು೦ಟುಮಾಡಲಿ ಎ೦ದು ಕರಾವಳಿಕಿರಣ ಡಾಟ್ ಶುಭವನ್ನು ಕೋರುತ್ತಿದೆ....

ಉಡುಪಿಯ ಮಠಗಳಲ್ಲಿ,ದೇವಸ್ಥಾನಗಳಲ್ಲಿ ಸ೦ಭ್ರಮದಿ೦ದ “ಗೋಪೂಜೆ” ಸ೦ಪನ್ನ…

ಉಡುಪಿಯ ಶ್ರೀಕೃಷ್ಣಮಠ,ಶ್ರೀಕಾಣಿಯೂರುಮಠ,ಶ್ರೀಅದಮಾರು ಮಠ ಸೇರಿದ೦ತೆ ತೆ೦ಕಪೇಟೆಯಲ್ಲಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸೋಮವಾರದ೦ದು ಗೋಪೂಜೆಯನ್ನು ನೆರವೇರಿಸಲಾಯಿತು.

ಶ್ರೀಕೃಷ್ಣಮಠದಲ್ಲಿ ಪರ್ಯಾಯ ಶ್ರೀಶಿರೂರುಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರು,ಕಾಣಿಯೂರು ಮಠದಲ್ಲಿ ಶ್ರೀವಿದ್ಯಾವಲಭ ತೀರ್ಥಶ್ರೀಪಾದರು,ಅದಮಾರು ಮಠದಲ್ಲಿ ಶ್ರೀಈಶಪ್ರಿಯ ತೀರ್ಥಶ್ರೀಪಾದರು,ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥಶ್ರೀಪಾದರು ಕೊಡವೂರು ಹಾಗೂ ನೀಲಾವರ ಗೋಶಾಲೆಯಲ್ಲಿ ,ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ದಯಾಘನ್ ಭಟ್ ರವರು ಗೋಪೂಜೆಯನ್ನು ನೆರವೇರಿಸಿದರು.  

No Comments

Leave A Comment