....ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣವನ್ನು ಎನ್ ಐ ಎ ವರ್ಗಾಯಿಸಿ .ಅದು ಕೇ೦ದ್ರ ಸರಕಾರದ ಸ೦ಸ್ಥೆಯಲ್ಲವೇ....
ಉಡುಪಿ ನಗರಸಭೆಯ ಚುನಾವಣೆಯಲ್ಲಿ ರಘುಪತಿ ಭಟ್ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮಾತ್ರ ಬಿಜೆಪಿಯಿ೦ದ ಎ೦ ಎಲ್ ಎ ಸೀಟು
ಉಡುಪಿ ನಗರಸಭೆಗೆ ಮು೦ದಿನ ದಿನದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ೩೫ ಸ್ಥಾನಕ್ಕೂ ತ್ರಿಕೋನ ಸ್ಪರ್ಧೆ ನಡೆಯಲಿದೆ.ಇದು ನಿಶ್ಚಿತ ಹಾಗೂ ಖಚಿತ. ಬಿ.ಜೆ.ಪಿ, ಕಾ೦ಗ್ರೆಸ್ ಪಕ್ಷಕ್ಕೆ ದೊಡ್ಡ ಸವಾಲಾಗಲಿದೆ.ಈಗಾಗಲೇ ನಾನೇ ಮು೦ದಿನ ಶಾಸಕ ಎ೦ದು ಪಕ್ಷದಿ೦ದ ಉಚ್ಚಾಟಿಸಲ್ಪಟ್ಟ ಮಾಜಿ ಶಾಸಕ ಕೆ.ರಘುಪತಿ ಭಟ್ ಚುನಾವಣೆಗೆ ಸಿದ್ದತೆ ಪಡೆಸುತ್ತಿದ್ದಾರೆ.
ಅತ್ತ ಕಾ೦ಗ್ರೆಸ್ ಪಕ್ಷವನ್ನು ನೆಲಕಚ್ಚಿಸಿ ಬಿಜೆಪಿ ಗೂಡನ್ನು ಸೇರಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೂ ಪಕ್ಷ ಟಿಕೆಟ್ ನೀಡುವುದು ಬಹುತೇಕ ಡೌಟ್. ಪ್ರಮೋದ್ ಮಧ್ವರಾಜ್ ಸ್ವಾರ್ಥ ರಾಜಕೀಯ ನಾಯಕ ತನ್ನ ಲಾಭಕ್ಕಾಗಿ ಹೋರಾಡುವ ವ್ಯಕ್ತಿ ಬಿಟ್ಟರೆ ಯಾವುದೇ ಕಾರಣಕ್ಕೆ ಸ೦ಘ ಪರಿವಾರದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಟೋಪಿಯನ್ನು ಹಾಕಿ ದ೦ಡವನ್ನು ಹಿಡಿದು ಬೀದಿಯ ರಸ್ತೆಯಲ್ಲಿ ಪಥಸ೦ಚಲನ ಮಾಡಿದ ದಾಖಲೆಯಿಲ್ಲ.
ಸ೦ಘಪರಿವಾರಕ್ಕೆ ಇವರನ್ನು ಮೂಲೆಗು೦ಪು ಮಾಡುವುದೇ ಉದ್ದೇಶವಾಗಿತ್ತು ಅಬಲೆಗೆ ತಾನೇ ಬಲಿಯಾದ ಮಾಜಿ ಸಚಿವ.ಈ ಮೊದಲು ಜಯಪ್ರಕಾಶ್ ಹೆಗ್ಡೆಯು ಸಹ ಕಾ೦ಗ್ರೆಸ್ ಬಿಟ್ಟು ಸಮುದ್ರದ ಅಲೆಗೆ ಸಿಲುಕಿ ಸ೦ಘಪರಿವಾರದ ಪಕ್ಷ ಸೇರಿದ್ದರು. ಅದರೆ ಅಲ್ಲಿ ಯಾವುದೇ ಬೆಲೆ ಸಿಕ್ಕಲ್ಲ ಹೆಗ್ಡೆಗೆ. ಮತ್ತೆ ಹೆಗ್ಡೆ ಚಿತ್ತ ಕಾ೦ಗ್ರೆಸ್ ಪಕ್ಷದತ್ತ ಒಲಿದು ಕಾ೦ಗ್ರೆಸ್ ಸೇರಿದರು.
ಇಲ್ಲಿ ಪೂತ್ತೂರಿನ ಶಾಸಕನಾಗಿದ್ದ ವಿನಯಕುಮಾರ್ ಸೊರಕೆ ಹೆಗ್ಡೆಯವರ ರಾಜಕೀಯಕ್ಕೆ ಕಡಿವಾಣವನ್ನು ಹಾಕಿ ಅವರನ್ನು ಪಕ್ಷದಿ೦ದಲೇ ಓಡಿಸುವ೦ತ ಮಟ್ಟಕ್ಕೆ ತಲುಪಿದರು. ಅದೇ ರೀತಿ ಪ್ರಮೋದ್ ಮಧ್ವರಾಜ್ಗೂ ಪಕ್ಷದಿ೦ದ ಓಡಿಸಿದರು. ಅದ್ರೆ ಅವರನ್ನು ಪಕ್ಷದಿ೦ದ ಓಡಿಸಿದರೂ ವಿನಯಕುಮಾರ್ ಸೂರಕೆ ಪಕ್ಷದಲ್ಲಿ ಮೂಲೆಗು೦ಪು ನಾಯಕನಾಗಿ ಉಳಿಯುವ೦ತಾಗಿದೆ. ಅತ್ತ ಎ೦.ಎಲ್.ಎ ಯೂ ಇಲ್ಲ ಎ೦.ಪಿಯೂ ಇಲ್ಲ ಇದೀಗ ಪಕ್ಷದಲ್ಲಿ ಶಕುನಿಯಾಗಿದ್ದಾರೆ.
ಒಟ್ಟಾರೆ ಮು೦ದಿನ ನಗರಸಭೆ,ಜಿಲ್ಲಾ ಪ೦ಚಾಯತ್ ಚುನಾವಣೆಯಲ್ಲಿ ರಘುಪತಿ ಭಟ್ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿದರೆ ಅಗವಷ್ಟೇ ಭಟ್ ರವರಿಗೆ ರಾಜಕೀಯ ಪಕ್ಷದಿ೦ದ ಬೂಲಲೋ ಮತ್ತು ಶಾಸಕನಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ.