ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ಉತ್ಥಾನ ದ್ವಾದಶಿಯಿ೦ದ ಲಕ್ಷದೀಪೋತ್ಸವ ಆರ೦ಭ.....ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಮಂಗಳೂರು: ಬೇಡಿಕೊಂಡರು 40ರ ವಿವಾಹಿತ ಧರ್ಮಗುರು ಜೊತೆ ಹೋದ 22ರ ಯುವತಿ; ಬಿಕ್ಕಿಬಿಕ್ಕಿ ಅತ್ತ ಪೋಷಕರು

ಮಂಗಳೂರು: ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ದೂರು ದಾಖಲಿಸಿದ ಬೆನ್ನಲ್ಲೇ ಮದರಸಾದ ವಿವಾಹಿತ ಧರ್ಮಗುರು ಜೊತೆ ಪ್ರತ್ಯಕ್ಷಳಾಗಿದ್ದಾಳೆ. ಮಂಗಳೂನ ಕೊಣಾಜೆ ಪೊಲೀಸ್ ಠಾಣೆಗೆ ಬಂದ ಯುವತಿ ಪೋಷಕರು ಎಷ್ಟೇ ಬೇಡಿಕೊಂಡರು. ಅದಕ್ಕೆ ತಲೆಕೊಡದೆ ಧರ್ಮಗುರುವಿನ ಜೊತೆ ಹೋಗಲು ನಿರ್ಧರಿಸಿದ್ದಳು.

ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬೆಟಗುಳಿಯ ನಿವಾಸಿ ದಾವುದ್ ಖಾಸಿಂ ಎಂಬುವರ ಪುತ್ರಿ 22 ವರ್ಷದ ಮಗದುಮ್ಮ ಮಂಗಳೂರಿನ ಅಸೈಗೋಳಿ ನಿವಾಸಿ ಅಶ್ರಫ್ ಸ ಅದಿ ಎಂಬ ಧರ್ಮಗುರು ಜೊತೆ ತೆರಳಿದ್ದಾಳೆ. ತಮ್ಮ ಮಗಳು ಬಿಟ್ಟುಹೋಗುತ್ತಿರುವುದನ್ನು ನೋಡಿದ ಪೋಷಕರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಧರ್ಮಗುರು ಅಶ್ರಫ್ ಸ ಅದಿಗೆ ಅದಾಗಲೇ ಮದುವೆಯಾಗಿ ಮಕ್ಕಳಿವೆ. ಯುವತಿ ವಯಸ್ಕಳಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ತನ್ನು ಆಯ್ಕೆಯನ್ನು ತಿಳಿಸುವಂತೆ ಸೂಚಿಸಿದ್ದಾರೆ. ಈ ವೇಳೆ ತಂದೆ, ತಾಯಿ, ಸಹೋದರ ಹಾಗೂ ಸಂಬಂಧಿಕರು ಮನವೊಲಿಸಲು ಪ್ರಯತ್ನಿಸಿದರೂ ಯುವತಿ ತನ್ನ ನಿರ್ಧಾರ ಬದಲಿಸಿಲ್ಲ. ಕೊನೆಗೆ ಧರ್ಮಗುರು ಜೊತೆಗೆ ಯುವತಿ ತೆರಳಿದ್ದಾಳೆ.

No Comments

Leave A Comment