....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಭಾ.ಜ. ಪಾರ್ಟಿ ಉಡುಪಿ ಜಿಲ್ಲೆ ಮಾರ್ಗದರ್ಶನದಲ್ಲಿ ಜಿಲ್ಲಾ ಎಸ್ ಟಿ ಮೋರ್ಚಾದ ಸಹಯೋಗದಲ್ಲಿ ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ “ಸೇವಾ ಸೇತು ಅಭಿಯಾನ”

ಉಡುಪಿ:ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ಮಾರ್ಗದರ್ಶನದಲ್ಲಿ ಜಿಲ್ಲಾ ಎಸ್ ಟಿ ಮೋರ್ಚಾದ ಸಹಯೋಗದಲ್ಲಿ ಸೇವಾ ಸಂಕಲ್ಪ ಅಭಿಯಾನದಡಿಯಲ್ಲಿ”ಸೇವಾ ಸೇತು ಅಭಿಯಾನ”ಸರಕಾರ ನಿಮ್ಮ ಬಾಗಿಲಿಗೆ ಶೀರ್ಷಿಕೆಯ ಅಡಿಯಲ್ಲಿ ಆದಿತ್ಯವಾರ ಶ್ರೀ ತುಳಜಾ ಭವಾನಿ ದೇವಿಕಟ್ಟೆ,ಕೆಳ ಪರ್ಕಳ ಕೂಡು ಕಟ್ಟಿನ ಸಮುದಾಯ ಭವನದಲ್ಲಿ ಆರೋಗ್ಯ ತಪಾಸಣಾ ಶಿಬಿರ, ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಯೋಜನೆಗಳ 5 ಜನ ಪಲಾನುಭವಿಗಳಿಗೆ ಸನ್ಮಾನ, ಹಾಗೂ ಪ್ರಧಾನ ಮಂತ್ರಿಗಳ ಮನ್ ಕೀ ಭಾತ್ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಬಿ ಜೆ ಪಿ ಅಧ್ಯಕ್ಷ ರಾದ ಶ್ರೀ ಕುತ್ಯಾರ್ ನವೀನ್ ಶೆಟ್ಟಿಯವರು ಉದ್ಘಾಟಿಸಿ ಶುಭಾಶಯ ಕೋರಿದರು.ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ,ಶಾಸಕರಾದ ಯಶಪಾಲ್ ಎ ಸುವರ್ಣ, ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್,ರಾಜ್ಯ ಬಿ ಜೆ ಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ಶ್ರೀಮತಿ ಶಿಲ್ಪ ಜಿ ಸುವರ್ಣ, ಬಿ ಜೆ ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ಶ್ರೀಕಾಂತ್ ನಾಯಕ್ ಅಲೆವೂರ್, ಶ್ರೀಮತಿ ರೇಷ್ಮಾ ಉದಯ ಶೆಟ್ಟಿ, ಸೇವಾ ಸಂಕಲ್ಪ ಅಭಿಯಾನದ ಜಿಲ್ಲಾ ಸಹ ಸಂಚಾಲಕರಾದ ಉಮೇಶ ಎ ನಾಯ್ಕ್ ಚೇರ್ಕಾಡಿ, ಕಾರ್ಯಕ್ರಮದ ಉಸ್ತುವಾರಿ ಗಳಾದ ರಾಘವೇಂದ್ರ ಕುಂದರ್,ಬಿ ಜೆ ಪಿ ನಗರ ಅಧ್ಯಕ್ಷರಾದ ದಿನೇಶ್ ಅಮೀನ್,ನಗರ ಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ನಾಯಕ್,ಸರಳೇ ಬೆಟ್ಟು ವಾರ್ಡಿನ ಮಾಜಿ ನಗರ ಸಭೆಯ ಸದಸ್ಯರಾದ ಶ್ರೀಮತಿ ವಿಜಯ ಲಕ್ಷ್ಮಿ, ಪರ್ಕಳ ವಾರ್ಡ್ ಅಧ್ಯಕ್ಷರಾದ ಹೇಮಂತ್ ಕುಮಾರ್, ತುಳಜಾ ಭವಾನಿ ದೇವಿ ಕಟ್ಟೆಯ ಗುರಿಕಾರರು ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.

ಜಿಲ್ಲಾ ಎಸ್ ಟಿ ಮೋರ್ಚಾದ ಅಧ್ಯಕ್ಷರಾದ ಭುಜಂಗ ನಾಯ್ಕ್ ಮಣಿಪಾಲ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರ ಸರಕಾರದ ಯೋಜನೆಯ ಫಲಾನುಭಾವಿಗಳಾದ ಶ್ರೀಮತಿ ಸುಂದರಿ ಬಾಯಿ, ಶ್ರೀಮತಿ ಭವ್ಯ ನಾಯ್ಕ್, ಶ್ರೀಮತಿ ಅನಿತಾ ನಾಯ್ಕ್, ಶ್ರೀಮತಿ ಸುನಂದ ನಾಯ್ಕ್, ಚಂದ್ರ ಶೇಖರ ನಾಯ್ಕ್ ಇವರನ್ನು ಗಣ್ಯರು ಸನ್ಮಾನಿಸಿದರು.

ಫಲಾನುಭಾವಿಗಳ ವಿವರವನ್ನು ಎಸ್ ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಭಾಷ್ ನಾಯ್ಕ್ ವಾಚಿಸಿದರು,ಎಸ್ ಟಿ ಮೋರ್ಚಾದ ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಉಮೇಶ್ ನಾಯ್ಕ್ ನೂಜಿನಬೈಲು ಧನ್ಯವಾದವಿತ್ತರು. ಸೇವಾ ಸಂಕಲ್ಪದ ಜಿಲ್ಲಾ ಸಮಿತಿಯ ಸದಸ್ಯರೂ,ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಕಮಲಾಕ್ಷ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

No Comments

Leave A Comment