..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........
ಪೆರ೦ಪಳ್ಳಿಯ ಕಾಂಗ್ರೆಸ್ ಮುಖಂಡ,ಉದ್ಯಮಿ, ರೆಜಿನಾಲ್ಡ್ ಡಿ’ಸಿಲ್ವ ಇನ್ನಿಲ್ಲ
ಉಡುಪಿ ಮೂಲತಃ ಪೆರಂಪಳ್ಳಿ ಯವರಾದ 80ನೇ ಬಡಗು ಬೆಟ್ಟುವಿನ ರಾಜೀವ ನಗರದಲ್ಲಿ ವಾಸಿಸುತ್ತಿದ್ದ ರೆಜಿನಾಲ್ಡ್ ಡಿಸಿಲ್ವ ಕಾಂಗ್ರೆಸ್ ಮುಖಂಡ ಉದ್ಯಮಿ, (72) ಅಲ್ಪ ಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 25ರಂದು ನಿಧನರಾದರು.
ಪತ್ನಿ ಒಂದು ಹೆಣ್ಣು ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.
ಅಪ್ಪಟ ಕಾಂಗ್ರೆಸ್ ನಾಯಕರಾಗಿದ್ದು, ಆಸ್ಕರ್ ಫರ್ನಾಂಡಿಸ್, ಮನೋರಮ ಮಧ್ವರಾಜ್, ಹಾಗೂ ಯು, ಆರ್. ಸಭಾಪತಿಯವರ ಚುನಾವಣೆಯಲ್ಲಿ ಅವರ ಗೆಲುವಿಗೆ ಶ್ರಮವಹಿಸಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಕೊಡುಗೈದಾನಿಯಾಗಿದ್ದ ಅವರು ಪಕ್ಷಸಂಘಟನೆಯಲ್ಲಿ ಅಂದಿನ ಕಾಲದಲ್ಲಿ ನಾಯಕರ ಗೆಲುವಿಗೆ ಶ್ರಮಿಸಿದ್ದರು.
ಅಂತ್ಯಕ್ರಿಯೆ ಸೆಪ್ಟೆಂಬರ್ 27ರ ಭಾನುವಾರ ಮಧ್ಯಾಹ್ನ 2:30 ರ ನಂತರ 80ನೇ ಬಡಗಬೆಟ್ಟು ರಾಜೀವ ನಗರ ಸ್ವಗೃಹದಲ್ಲಿ ಹೊರಟು ಮಣಿಪಾಲದ ಚರ್ಚಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.