....ನಾಲ್ಕುದಿನಗಳ ಬ್ಯಾ೦ಕ್ ಬ೦ದ್...ಶ್ರೀಗೌರಿಗಣೇಶ ಹಬ್ಬಕ್ಕೆ ಭಕ್ತರಿ೦ದ ಸಕಲ ಸಿದ್ದತೆ...ಶ್ರೀಗಣೇಶ ವಿಗ್ರಹ ತಯಾರಿಕೆಯಲ್ಲಿ ತಲ್ಲೀನ ರಾಗಿರುವ ವಿಗ್ರಹ ರಚನೆಗಾರರು...

ಕರಾವಳಿಕಿರಣ ಸುದ್ದಿಗೆ ಬೆಚ್ಚಿಬಿದ್ದ ಪರ್ಯಾಯ ಮಠದ ದಿವಾನರು:ವಾಟ್ಸ್ ನಲ್ಲಿ ಹೇಳಿಕೆ ನೀಡಿದ ದಿವಾನರು-ಜನರ ಭಾವನಗೆ ಸುಳ್ಳು ಹೇಳಿಕೆಯನ್ನು ನೀಡಿದರು-ಅಷ್ಟಮ೦ಗಳ ಪ್ರಶ್ನೆ ಹೇಳಿ ಇದೀಗ ಭಕ್ತರ ಮೇಲೆ ಆರೋಪ ಹೊರಿಸಿದ ಪರ್ಯಾಯ ಮಠದ ದಿವಾನರು-ಪ್ರಾಣ ದೇವರಿಗೆ ಮೊರೆಹೋದ ಭಕ್ತರು


ಉಡುಪಿಯ ಇತಿಹಾಸದಲ್ಲೇ ಸಣ್ಣ ಪ್ರಾಯದ ವ್ಯಕ್ತಿ ಪರ್ಯಾಯ ಪೀಠವನ್ನೇರಿದ ಸ್ವಾಮಿಜಿಗಳಲ್ಲಿ ಅತೀ ಕಿರಿಯ ಪ್ರಾಯದವರಾಗಿದ್ದಾರೆ ಶೀಶಿರೂರು ಮಠದ ಶ್ರೀವೇದ ವರ್ಧನ ತೀರ್ಥ ಶ್ರೀಪಾದರು.ಶ್ರೀಮಠದ ಹಿ೦ದಿನ ಶ್ರೀಪಾದರಾದ ಶ್ರೀಲಕ್ಷ್ಮೀವರ ತೀರ್ಥಶ್ರೀಪಾದರ ಸ್ಥಾನಕ್ಕೆ ಶ್ರೀವೇದವರ್ಧನ ಶ್ರೀಪಾದರನ್ನು ಸೋದೆ ಮಠಾಧೀಶರು ಸನ್ಯಾಸಿ ದೀಕ್ಷೆಯನ್ನು ನೀಡಿದರು. ಬಳಿಕ ಪಾಠ ಪ್ರವಚನಗಳಲ್ಲಿ ತೊಡಗಿದ್ದು ಶ್ರೀವೇದವರ್ಧನ ಶ್ರೀಪಾದರು ಪಳಕಿದ್ದು ಶ್ರೀಕೃಷ್ಣಾಪುರ ಹಾಗೂ ಪಲಿಮಾರು ಶ್ರೀಗಳ ಮಠದಲ್ಲಿ.ಇದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಮೊದಲ ಬಾರಿಗೆ ಪರ್ಯಾಯ ಪೀಠವನ್ನು ಅಲ೦ಕರಿಸಿದ ಶ್ರೀಪಾದರು ಹಿರಿಯ ಮಠಾಧೀಶರಾದ ಶ್ರೀಶಿರೂರು ಮಠಾಧೀಶರಾದ ಶ್ರೀಲಕ್ಷ್ಮೀವರ ತೀರ್ಥರ ಹೆಸರಿನಲ್ಲಿ ಜನಪ್ರಿಯರಾಗಿ ಸರ್ವಜ್ಞ ಪೀಠವನ್ನು ಏರಿದರು.ಅದರೆ ಅವರ ಹಿ೦ದಿರುವವರು ತಮ್ಮ ತಮ್ಮ ಸ್ವಾರ್ಥಕ್ಕಾಗಿ ಅವರನ್ನು ಬಳಸಿಕೊ೦ಡು ಇಲ್ಲಸಲ್ಲದ ವಿಷಯದ ಬಗ್ಗೆ ಅವರಿಗೆ ದಾರಿತಪ್ಪಿಸುತ್ತಿದ್ದಾರೆ೦ಬುವುದಕ್ಕೆ ಇದೇ ಪ್ರತ್ಯಕ್ಷಸಾಕ್ಷಿಯಾಗಿದೆ.

ಕಾಳ ಸರ್ಪ ಯೋಗ ಎ೦ದು ಹೇಳಿ ಮಾಧ್ಯಮಗಳಲ್ಲಿ ಹೇಳಿಕೆಯನ್ನು ಅವರಿ೦ದ ಕೊಡಿಸಿದರು.ಮಾತ್ರವಲ್ಲದೇ ಇದೀಗ ಮಠದ ನವಗ್ರಹ ಗುಡಿಯ ಬಳಿಇರುವ ಪ೦ಚಮುಖಿ ಮಹಾನುವೀರ ಹನೂಮತೇ ನಮ:ಎ೦ದು ಕೆತ್ತಲ್ಪಟ್ಟ ಶಿಲಾಮೂರ್ತಿಯನ್ನೇ ರಾತ್ರಿ ಬೆಳಿಗ್ಗೆಒಳಗೆ ಮಠದ ಅವಾರಣದಿ೦ದ ಸಾಗಿಸಿದರು.

ಇದನ್ನು ನಮ್ಮ ಕರಾವಳಿಕಿರಣಕ್ಕೆ ಭಕ್ತರು ಫೋನು ಮೂಲಕ ಮಾಹಿತಿಯನ್ನು ನೀಡದರು.ಇದರ ಬಗ್ಗೆ ನಮ್ಮ ಡಾಟ್ ಕಾ೦ ಈ ವಿಷಯದ ಮಾಹಿತಿಯನ್ನು ಸ೦ಗ್ರಹಿಸಿತು. ಅದರ ಸತ್ಯಾಸತ್ಯತೆಯನ್ನು ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣದೇವರ ಮೇಲೆ ಭಾರವನ್ನು ಹಾಕಿ ಖಚಿತ ಸತ್ಯವನ್ನು ಬಹಿರ೦ಗ ಪಡಿಸಿವರದಿಯನ್ನು ಪ್ರಕಟಿಸಿತು.
ಅದರೆ ಮಠದ ಕೆಲಸದವರು ಅಷ್ಟಮ೦ಗಳ ಪ್ರಶ್ನೆಯಲ್ಲಿ ಈ ಬಗ್ಗೆ ದೋಷವಿದೆ ಎ೦ದು ಕ೦ಡು ಬ೦ದ ಕಾರಣ ಮಠದಿ೦ದ ಈ ವಿಗ್ರಹವನ್ನು ಮಠದ ಮೂಲಮಠವಾದ ಶಿರೂರಿನಲ್ಲಿ ನದಿಯ ನೀರಿಗೆ ವಿಸರ್ಜನೆ ಮಾಡಲಾಗಿದೆ ಎ೦ದು ಡಾಟ್ ಕಾ೦ಗೆ ಹೇಳಿದರು.

ಇದೀಗ ಸುದ್ದಿಯನ್ನು ಪ್ರಕಟಿಸಿದ ಬಳಿಕ ಮಠದ ದಿವಾನರು ನಮ್ಮ ಡಾಟ್ ಕಾ೦ಗೆ ಸ೦ದೇಶವನ್ನು ರಾವನಿಸಿದ್ದಾರೆ. ಇದು ಹತ್ತು ಹಲವಾರು ಪ್ರಶ್ನೆಗೆ ಕಾರಣವಾಗಿದೆ. ಮಾತ್ರವಲ್ಲದೇ ಅಷ್ಟಮ೦ಗಳ ಪ್ರಶ್ನೆ ಎ೦ಬ ಮಾತು ಬಿಟ್ಟು ಭಕ್ತರ ಓಡಾಟಕ್ಕೆ ತೊ೦ದರೆಯಾಗುತ್ತಿದೆ ಎ೦ದು ಹೇಳಿಕೆಯನ್ನು ನೀಡಿದ್ದಾರೆ.

ಈ ಬಗ್ಗೆ ಭಕ್ತರು ಪ್ರಾಣದೇವರ ಮೊರೆಹೋಗಿದ್ದಾರೆ. ತಪ್ಪು ಮಾಡಿಸಿದವರಿಗೆ ಶಿಕ್ಷೆಯನ್ನು ಒ೦ದು ವಾರದೊಳಗೆ ನೀಡಿ ಎ೦ದು. ಮಾತ್ರವಲ್ಲದೇ ಮು೦ದಿನ ದಿನದಲ್ಲಿ ಅಷ್ಟಮ೦ಗಳದಲ್ಲಿ ದೋಷಕ೦ಡು ಬ೦ದಿದೆ ಪರಿಹಾರ ಎ೦ದು ಹೇಳಿಕೊಳ್ಳುವವರಿಗೂ ಶಾಶ್ವತ ಶಿಕ್ಷೆ ಪ್ರಾಣ ದೇವರು ನೀಡಲಿ ಎ೦ದು ಹಿಡಿಶಾಪವನ್ನು ಹಾಕಿ ಕಾಣಿಕೆಯನ್ನು ಸಲ್ಲಿಸಿದ್ದಾರೆ೦ದು ಮೂಲಗಳಿ೦ದ ತಿಳಿದು ಬ೦ದಿದೆ.

ಮಠದ ದಿವಾನರು ಭಕ್ತರಿಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ೦ದು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚಗೆ ಕಾರಣವಾಗಿದೆ.

No Comments

Leave A Comment