.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ 126 ನೇ ಭಜನಾ ಮಹೋತ್ಸವ;ಸ೦ಪನ್ನ…

ಉಡುಪಿ: ಆಗಸ್ಟ್ 25 ; ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ 126 ನೇ ಭಜನಾ ಮಹೋತ್ಸವ ಕಳೆದ 8 ದಿನಗಳ ಕಾಲ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ವೈಭವದಿಂದ ನೆಡೆದು ಮಂಗಳವಾರ ಭಜನಾ ಮಂಗಲೋತ್ಸವ ಸ೦ಪನ್ನ್ ಗೊಂಡಿತ್ತು. ಶ್ರೀದೇವರಿಗೆ ಇಂದು ಶ್ರೀ ದೇವಿ ಭೂದೇವಿ ಸಹಿತ ಶ್ರೀ ಲಕ್ಷ್ಮೀ ವೆಂಕಟೇಶ ವಿಶೇಷ ಅಲಂಕಾರ ಮಾಡಿ ಮಹಾಪೂಜೆ ನೆರವೇರಿಸಿದರು ಬಳಿಕ ಭಜನಾ ಸಾಳಿಯ ರಜತ ಮಂಟಪದಲ್ಲಿ ಭಜನಾ ಮೊಹೋತ್ಸವದ ಆರಾಧ್ಯ ದೇವರಾದ ಶ್ರೀ ವಿಠೋಬ ರುಖುಮಾಯಿ ದೇವರಿಗೆ ಆರತಿ ಬೆಳಗಿಸಿ ಪ್ರಧಾನ ಅರ್ಚಕ ದಯಾಘನ್ ಭಟ್ ಮಂಗಲೋತ್ಸವಕ್ಕೆ ಚಾಲನೆ ನೀಡಿದರು.

ಧಾರ್ಮಿಕ ಪೂಜಾ ವಿಧಾನದಲ್ಲಿ ದೀಪಕ್ ಭಟ್ , ಗಿರೀಶ್ ಭಟ್ , ಮೇಘಶ್ಯಾಮ ಭಟ್ , ರವೀಂದ್ರ ಭಟ್ ಸಹಕರಿಸಿದರು. ಶ್ರೀದೇವರ ಉತ್ಸವದಲ್ಲಿ ನೂರಾರು ಭಕ್ತರೂ ಭಕ್ತಿಯಿಂದ ಜೈ ವಿಠಲ್ , ಹರಿ ವಿಠಲ್ ಸ್ಮರಣೆ ಯೊಂದಿಗೆ ಮಂಗಲಾಚರಣೆ , ಮಡಸ್ತಾನ ಸೇವೆ ( ಭಕ್ತರಿಂದ ಉರುಳು ಸೇವೆ ) ಪಾಲ್ಗೊಂಡರು ಮೊಸರು ಕುಡಿಕೆ , ತೆಪ್ಪಂಗಾಯಿ ಸೇವೆ , ಮಹಾಪೂಜೆಯ ಬಳಿಕ ಸಮಾರಾಧನೆ , ರಾತ್ರಿ ಮರು ಭಜನೆ ನೆಡೆಯಿತು. ದೇವಳದ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ , ಆಡಳಿತ ಮಂಡಳಿಯ ಸದಸ್ಯರಾದ ನಾರಾಯಣ ಪ್ರಭು , ಡಾ ಕೈಲಾಸನಾಥ ಶೆಣೈ , ಉಮೇಶ ಪೈ , ಅಶೋಕ ಬಾಳಿಗ , ದಿನೇಶ್ ಪೈ ,ಡಾ ವಿನಾಯಕ ಶೆಣೈ , ಸುಭಾಸ್ ಮಧುಕರ್ ಕಾಮತ್ , ವೆಂಕಟೇಶ್ ಭಟ್ , ಪ್ರಭಾಕರ್ ಭಟ್ , ಮಹೇಶ್ ಶೆಣೈ , ಮಟ್ಟಾರ್ ವಸಂತ್ ಕಿಣೆ , ಚಿತ್ತರಂಜನ್ ಭಟ್ , ಹರಿರಾಮ್ ಶೆಣೈ ಹಾಗೂ ಭಜನಾ ಮೊಹೋತ್ಸವದ ಅಧ್ಯಕ್ಷ ಮಟ್ಟಾರ್ ಸತೀಶ್ ಕಿಣಿ , ಭಾಸ್ಕರ್ ಶೆಣೈ , ವಿಶಾಲ್ ಶೆಣೈ , ಜಿ ಎಸ್ ಬಿ ಯುವಕ ಮಂಡಳಿಸದಸ್ಯರು , ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಭಜನಾ ಮಹೋತ್ಸವ ಸಮಿತಿಯ ಸದಸ್ಯರು , ಶ್ರಾವಣ ಶನಿವಾರ ಭಜನಾ ಮಂಡಳಿಯ ಸದಸ್ಯರು , ವಿವಿಧ ಸಮಿತಿಯ ಸದಸ್ಯರು ಹಾಗೂ ಊರ ಪರಊರ ನೂರಾರು ಭಜನಾ ಮಂಡಳಿಯ ಸದಸ್ಯರು , ಸಾವಿರಾರು ಸಮಾಜ ಬಾಂದವರು ಉಪಸ್ಥಿತರಿದರು.

No Comments

Leave A Comment