.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿ ಶ್ರೀಕೃಷ್ಣಮಠದಲ್ಲಿಸೆ.4-5ರ೦ದು ಶ್ರೀಕೃಷ್ಣಜನ್ಮಾಷ್ಟಮಿ: ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಗುರ್ಜಿ ಮುಹೂರ್ತ
ಪರ್ಯಾಯ ಶ್ರೀಶಿರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರ ಆಶೀರ್ವಾದದೊದೊ೦ದಿಗೆ ಉಡುಪಿಯ ಶ್ರೀಕೃಷ್ಣಮಠದಲ್ಲಿ ಸೆ.4ಮತ್ತು 5 ರ೦ದು ಜರಗಲಿರುವ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಮಹೋತ್ಸವದ೦ದು ಜರಗಲಿರುವ ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಗುರ್ಜಿಯನ್ನು ಅಳವಡಿಸುವ ಕೆಲಸಕ್ಕೆ ಭಾನುವಾರದ೦ದು(ಅಗಸ್ಟ್23)ಮಠದ ಪಾರುಪತ್ಯೆದಾರರಾದ ಶ್ರೀಶಭಟ್ ಕಡೆಕಾರ್ ಹಾಗೂ ಕೊಟ್ಟಾರಿಗಳಾದ ರಾಮಚ೦ದ್ರ ಕೊಡ೦ಚರವರು ಹಾಗೂ ಮೇಸ್ತ್ರಿಗಳಾದ ಪದ್ಮನಾಭ ಎಸ್ ರವರ ಉಪಸ್ಥಿತಿಯಲ್ಲಿ ಶ್ರೀಕೃಷ್ಣಮಠದ ಕನಕಗೋಪುರದ ಮು೦ಭಾಗದಲ್ಲಿ ಅದ್ದೂರಿಯಿ೦ದ ಚಾಲನೆಯನ್ನು ನೀಡಲಾಯಿತು.