.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಕೃಷ್ಣಾಂಗಾರಕ ಚತುರ್ದಶಿ: ಸುವರ್ಣ ನದಿಗೆ ಬಾಗಿನ ಅರ್ಪಿಸಿದ ಶಾಸಕ ಯಶ್ಪಾಲ್ ಸುವರ್ಣ

ಉಡುಪಿ:ಆಗಸ್ಟ್ 11: ಕೃಷ್ಣಾಂಗಾರಕ ಚತುರ್ದಶಿಯ ಪ್ರಯುಕ್ತ ಉಡುಪಿಯ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಪವಿತ್ರ ಸುವರ್ಣ ನದಿ ತೀರದಲ್ಲಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಸುವರ್ಣ ನದಿಗೆ ಬಾಗಿನ ಅರ್ಪಿಸಿ ಪವಿತ್ರ ತೀರ್ಥಸ್ನಾನ ನೆರವೇರಿಸಿದರು.

ನ೦ತರ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಇತಿಹಾಸ ಪ್ರಸಿದ್ಧ ಶೀಂಬ್ರ ಸಿದ್ಧಿ ವಿನಾಯಕ ದೇವಸ್ಥಾನದ ನದಿ ಸ್ನಾನ ಘಟ್ಟ ಹಲವು ವರ್ಷಗಳಿಂದ ತೀವ್ರ ನದಿ ಕೊರೆತದಿಂದ ಹಾನಿಗೀಡಾಗಿ, ಪ್ರತಿವರ್ಷ ಕೃಷ್ಣಂಗಾರಕ ಚತುರ್ದಶಿಯಂದು ವಿವಿಧ ರಾಜ್ಯಗಳಿಂದ ತೀರ್ಥಸ್ನಾನಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಸಮಸ್ಯೆಗಳ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಮನವಿಯಂತೆ ಸಣ್ಣ ನೀರಾವರಿ ಇಲಾಖೆಯ ಮೂಲಕ 2.25 ಕೋಟಿ ಅನುದಾನ ಒದಗಿಸಿ ಇಂದು ಕೃಷ್ಣಂಗಾರಕ ಚತುರ್ದಶಿಯಂದೇ ಉಡುಪಿಯ ಜೀವನಾಡಿಯಾಗಿ ಕುಡಿಯುವ ನೀರು, ಕೃಷಿ ಚಟುವಟಿಕೆಗೆ ಮೂಲ ಆಸರೆಯಾಗಿರುವ ಸ್ವರ್ಣ ನದಿಗೆ ದೇವಸ್ಥಾನದ ವತಿಯಿಂದ ಬಾಗಿನ ಸಮರ್ಪಣೆ ಮಾಡುವ ಮೂಲಕ ನೂತನ ಸ್ನಾನ ಘಟ್ಟದ ಲೋಕಾರ್ಪಣೆ ಗೊಳಿಸಲಾಗಿದ್ದು ಮುಂದಿನ ದಿನಗಳಲ್ಲಿಯೂ ದೇವಸ್ಥಾನದ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಸಹಕಾರ ನೀಡುವುದಾಗಿ ಹೇಳಿದರು.

ಪವಿತ್ರ ಸುವರ್ಣ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ಸ್ನಾನಘಟ್ಟ ಹಾಗೂ ಸಂಪರ್ಕ ರಸ್ತೆ ಭಕ್ತರಿಗೆ ಅನುಕೂಲವಾಗುವುದರ ಜೊತೆಗೆ, ಈ ಪುಣ್ಯಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ.

ಈ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಪವಿತ್ರ ಸ್ನಾನಘಟ್ಟ ಹಾಗೂ ಸಂಪರ್ಕ ರಸ್ತೆಯನ್ನು ಉಡುಪಿಯ ಹಿಂದೂ ಸಂಘಟನೆಗಳ ಮಾರ್ಗದರ್ಶಕರು ಹಾಗೂ ಹೆಸರಾಂತ ಉದ್ಯಮಿಗಳಾದ ಶ್ರೀ ಬಾಲಾಜಿ ರಾಘವೇಂದ್ರ ಆಚಾರ್ಯ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಹಿರಿಯರಾದ ಅಜಿತ್ ಪೈ, ಖ್ಯಾತ ಇಂಜಿನಿಯರ್ ರಮೇಶ್ ರಾವ್, ಯುವ ಬ್ರಾಹ್ಮಣ ಪರಿಷತ್ತಿನ ಚಂದ್ರಕಾಂತ ಕೆ.ಎನ್., ನಾಗರಾಜ ತಂತ್ರಿ, ಹರಿಕೃಷ್ಣ ಶಿವತ್ತಾಯ, ಪ್ರಶಾಂತ ಭಟ್ ಪೆರಂಪಳ್ಳಿ, ಶ್ರೀಮತಿ ಅನಿತಾ ಬೆಲಿಂಡಾ ಡಿಸೋಜಾ, ಗಣಪತಿ ಭಟ್, ವಾದಿರಾಜ ಆಚಾರ್ಯ, ಬಿಜೆಪಿ ಜಿಲ್ಲಾ ವಕ್ತಾರರಾದ ಮಧುಕರ ಮುದ್ರಾಡಿ, ಡೆನಿಸ್ ಮಸ್ಕರೇನಸ್, ಗೋಪಾಲಾಚಾರ್ ಸೇರಿದಂತೆ ವಿದ್ವಾಂಸರು ಹಾಗೂ ಗಣ್ಯರು ಉಪಸ್ಥಿತರಿದ್ದರು.

No Comments

Leave A Comment