.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಅಯೋಧ್ಯ ಶ್ರೀರಾಮ ಮಂದಿರದ ಹಣ ದುರುಪಯೋಗ: ಮನೆಮನೆಗೆ ಬಂದು ದೇಣಿಗೆ ಪಡೆದುಕೊಂಡದ್ದು ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರಲ್ಲವೇ:ಸುರೇಶ್ ಶೆಟ್ಟಿ ಬನ್ನಂಜೆ ಪ್ರಶ್ನೆ
ಉಡುಪಿ:ಬಿಜೆಪಿಯವರು ಅಧಿಕಾರವನ್ನು ಪಡೆದುಕೊಳ್ಳಲು 1989ನೇ ಇಸ್ವಿಯಿಂದಲೇ ಶ್ರೀರಾಮಚಂದ್ರನ ಹೆಸರು ಹೇಳಿಕೊಂಡು ಯತ್ನಿಸಿದ್ದಾರೆ.ತದನಂತರ ದೇಶದಾದ್ಯಂತ ಮನೆ ಮನೆಗೆ ತೆರಳಿದ ಬಿಜೆಪಿ ಮತ್ತು ಆರ್ ಎಸ್ ಎಸ್ ಕಾರ್ಯಕರ್ತರು ಇಟ್ಟಿಗೆ ರೂಪದಲ್ಲಿ ದೇಣಿಗೆಯನ್ನು ಪಡೆದು. ನಂತರ ದಿನಗಳಲ್ಲಿ ರಾಮ ಮಂದಿರ ಸ್ಥಾಪಿಸುವ ಬಗ್ಗೆ ನಿರಂತರವಾಗಿ ಜನಸಾಮಾನ್ಯರಲ್ಲಿ ದೇಶದಾದ್ಯಂತ ಅಪಪ್ರಚಾರವನ್ನು ಮಾಡಿ. ಸುಳ್ಳು ಸುದ್ದಿಯನ್ನು ಹೊರಡಿಸಿ ನಮ್ಮ ದೇಶದ ಹಿಂದೂ ಬಾಂಧವರಿಗೆ ಮೋಸವನ್ನು ಮಾಡಿ ಅಧಿಕಾರವನ್ನು ಪಡೆದಿರುತ್ತಾರೆ.
ಲಕ್ಷಾಂತರ ಕೋಟಿ ದೇಣಿಗೆಯನ್ನು ನಮ್ಮ ರಾಜ್ಯ ಸರ್ಕಾರ ನೀಡಿದ ಉಚಿತ ಅಕ್ಕಿಗೆ ಅರಿಶಿನವನ್ನು ಬೆರೆಸಿ ಮನೆ ಮನೆಗೆ ತೆರಳಿ ಅಯೋಧ್ಯ ಶ್ರೀ ರಾಮ ಮಂದಿರದ ಶ್ರೀರಾಮದೇವರ ಮಂತ್ರಾಕ್ಷತೆ ಎಂದು ಸುಳ್ಳು ಹೇಳಿ ದೇಣಿಗೆಯನ್ನು ಪಡೆದವರು ಇದೇ ಬಿಜೆಪಿಯ ಕಾರ್ಯಕರ್ತರು ಮತ್ತು ಆರ್ ಎಸ್ ಎಸ್ ನವರು. ಇದು ನಮ್ಮ ದೇಶದ ಎಲ್ಲಾ ಜನರಿಗೂ ತಿಳಿದಿದೆ.ಇದನ್ನು ಮರೆಯುವ ಕೆಲಸವನ್ನು ಬಿಜೆಪಿಯ ಕೇಂದ್ರ ಸರಕಾರ ಮಾಡುತ್ತಿರುವುದು ಖ೦ಡನೀಯ.
ನೀವು ದೇಶದಾದ್ಯಂತ ಕೆಲವು ರಾಜ್ಯಗಳಲ್ಲಿ ಮತ್ತು ನಮ್ಮ ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದರೆ ಕೇವಲ ಶ್ರೀರಾಮದೇವರ ಹೆಸರು ಹೇಳಿಕೊಂಡು ಮಾತ್ರ.ಮುಂದಿನ ದಿನಗಳಲ್ಲಿ ನಿಮ್ಮ ಈ ನಾಟಕ ನಡೆಯುವುದಿಲ್ಲ ಎಂಬುದು ನೆನಪಿರಲಿ.
ಎಷ್ಟು ವರ್ಷಗಳಿಂದ ನೀವು ದೇಣಿಗೆ ಪಡೆಯುತ್ತಿದ್ದೀರಿ ಪಡೆದಂತಹ ಲೆಕ್ಕಗಳನ್ನು ಕೂಡಲೇ ದೇಶದ ಜನಸಾಮಾನ್ಯರಿಗೆ ತಿಳಿಸಿ. ಮುಂದಿನ ದಿನಗಳಲ್ಲಿ ದೇವರ ಹೆಸರಲ್ಲಿ ಮತ್ತು ಹಿಂದುತ್ವದ ಹೆಸರಲ್ಲಿ ಮತವನ್ನು ಯಾಚಿಸಿ ಜನಸಾಮಾನ್ಯರನ್ನು ಮೋಸಗೊಳಿಸಿದನ್ನು ಬಿಟ್ಟು. ನೀವು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಬಂದು ಚುನಾವಣೆಗೆ ಸ್ಪರ್ಧಿಸಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಉಡುಪಿ ನಗರಸಭೆಯ ನಗರಸಭಾ ಸದಸ್ಯರು {ನಾಮ ನಿರ್ದೇಶಕ) ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.