..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ಕಳಚಿ ಹೋಯಿತು ಉದುಪಿ ತೆ೦ಕಪೇಟೆಯ ವಾರ್ಡಿನ ಬಿಜೆಪಿಯ ಜಿ.ಎಸ್.ಜಿ ಸಮಾಜದ ನಗರ ಸಭೆಯ ಸದಸ್ಯತ್ವ ಸ್ಥಾನಮಾನ. ಬ್ರಾಹ್ಮಣ ಸಮಾಜದ ತೆಕ್ಕೆಗೆ. ಮಧುಕರ್ ಮುದ್ರಾಡಿ ಮು೦ದಿನ ನಗರ ಸಭೆಯ ಚುನಾಣೆಯ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ...
ಉಡುಪಿ ಮಹಿಳಾ ಮಂಡಳಿಗಳ ಒಕ್ಕೂಟ- ಮಹಿಳೆಯರ ಆಟಿದ ಕೂಟ ಸಂಭ್ರಮ…
ಉಡುಪಿ:ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೊಟ ಉಡುಪಿ , ಬಡಗುಬೆಟ್ಟು ಕ್ರೆಡಿಟ್ ಕೋ. ಸೊಸೈಟಿ ಇದರ ಸಹಯೋಗದೊಂದಿಗೆ ಮಹಿಳೆಯರ ಆಟಿದ ಕೂಟ ಸೋಮವಾರದ೦ದು ಜಗನ್ನಾಥ ಸಭಾಭವನ ಜರಗಿತು.
ಉಡುಪಿ ಶಾಸಕರಾದ ಯಶಪಾಲ್ ಸುವರ್ಣ , ಬಡಗುಬೆಟ್ಟಿನ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಜೊತೆ ಗೂಡಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಮಹಿಳಾ ಒಕ್ಕೂಟ ಕಳೆದ 30 ವರ್ಷಗಳಿಂದ ಪ್ರತಿವರ್ಷವೂ ವಿವಿಧ ಬಗೆಯ ಕಾರ್ಯಕ್ರಮ ಸಂಘಟಿಸಿ ಬರುವುದರ ಜೊತೆಗೆ ಆಟಿದ ಕೂಟವನ್ನು ಪ್ರತಿವರ್ಷ ಮಾಡಿಕೊಂಡು ಬಂದಿದೆ.
ಮಹಿಳೆಯರ ಒಗ್ಗಟಿನ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಿದೆ. ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ಪದಾರ್ಥಗಳ್ಳನ್ನು ವೀಕ್ಷಸಿ ಸಂತಸ ಪಟ್ಟರು. ವಿವಿಧ ಮಹಿಳಾ ತಂಡದವರಿಂದ ಮನೋರಂಜನಾ ನೆಡೆಯಿತು. ನೂರಾರು ಮಹಿಳೆಯರು ಆಟಿದ ಭೋಜನ ಸವಿದು ಸಂತಸ ಪಟ್ಟರು.
ಉಪಾಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ ನಮ್ಮ್ ಪರಿಸರದಲ್ಲಿ ದೊರೆಯುವ ಸಸ್ಯಗಳ ಪರಿಚಯ ಹಾಗೂ ಆಟಿದ ಊಟ , ತಿನಿಸುಗಳಲ್ಲಿ ಅಡಗಿರುವ ಔಷಧಿ ಗುಣ ಹೊಂದಿದ್ದ ಮಹತ್ವ ಬಗ್ಗೆ ತಿಳಿಸಿ ಕೊಟ್ಟು ಆಷಾಡ ಮಳೆಯ ಸಮಯದಲ್ಲಿ ಇಂತಹ ಆಹಾರ ಸೇವೆನೆಯಿಂದ ಉತ್ತಮ ಅರೋಗ್ಯ ದೊರೆಯುವುದಾಗಿ ಸಭೆಗೆ ತಿಳಿ ಹೇಳಿದರು.
ಜಿಲ್ಲಾ ಒಕ್ಕೊಟದ ಗೌರವ ಅಧ್ಯಕ್ಷೆ ಶೀಲಾ ಶೆಟ್ಟಿ , ಮಹಿಳಾ ಒಕ್ಕೊಟದ ಪಧಾದಿಕಾರಿಗಳು ಉಪಸ್ಥಿತರಿದ್ದರು. ತಾಲೂಕು ಮಹಿಳಾ ಮಂಡಳಿಗಳ ಒಕ್ಕೊಟ ಉಡುಪಿ ಇದರ ಅಧ್ಯಕ್ಷೆ ಪದ್ಮಾ ರತ್ನಾಕರ್ ಸ್ವಾಗತಿದರು , ಜ್ಯೋತಿ ರಾವ್ , ರೇವತಿ ನಿರೂಪಣೆ ಗೈದರು , ಶ್ರೀಮತಿ ಸಹಾಯ ಮೇರಿ ವಂದಿಸಿದರು.