....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...

ಉಡುಪಿ ಜಿಲ್ಲೆಯಲ್ಲಿ ಮತ್ತೆ ನೆತ್ತರ ಓಕುಳಿ-ಪೊಲೀಸರ,ಕಾನೂನಿನ ಭಯವೇ ಇಲ್ಲದೇ ನಡೆಯುತ್ತಿದೆ ಹಾಡುಹಗಲೇ ಕೊಲೆಗಳು-ಅರೋಪಿಗಳನ್ನು ಎನ್ಕೌ೦ಟರ್ ಮಾಡಿ ಜಿಲ್ಲೆಯ ಜನರಿ೦ದ ಒತ್ತಾಯ…

ಉಡುಪಿ: ಮತ್ತೆ ಪ್ರಶಾ೦ತವಾದ ಹಾಗೂ ಬುದ್ಧಿವ೦ತರ ಉಡುಪಿ ಜಿಲ್ಲೆಯ ಶೂಟೌಟ್…ಪ್ರಕರಣಗಳು ರಾಜಾರೋಷವಾಗಿ ಬೆಳ್ಳ೦ಬೆಳಿಗ್ಗೆ,ಹಾಡುಹಾಗಲಲ್ಲೇ ನಡೆಯುತ್ತಿದೆ ಎ೦ದಾದರೆ ಎಲ್ಲೋ ಒ೦ದುಕಡೆ ಆರೋಪಿಗಳಿಗೆ ಪೊಲೀಸರ ಮತ್ತು ಕಾನೂನಿನ ಭಯವೇ ಇಲ್ಲಎ೦ಬ೦ತಾಗಿದೆ.

ಈ ಹಿ೦ದೆ ಜಿಲ್ಲೆಯಲ್ಲಿ ಹಲವಾರು ಕೊಲೆಗಳು ನಡೆಯುತ್ತಿದ್ದ ಸಮಯ ಒ೦ದಿತ್ತು.ಅದೆಲ್ಲವೂ ಅವರವರ ದ್ವೇಷಗಳಿ೦ದ.ಅ೦ದು ಕೊಲೆಗಳು ಮಾರಕಾಯುಧಗಳಿ೦ದ ಬೀದಿಯಲ್ಲಿ,ಮನೆಗಳಲ್ಲಿ ನಡೆಯುತ್ತಿತ್ತು. ಇದೀಗ ಪೊಲೀಸ್ ಇಲಾಖೆಯ ಹೆದರಿಕೆ ಎ೦ಬುದೇ ಇಲ್ಲದೇ ಕೊಲೆಗಳ ಸರಮಾಲೆ ಉಡುಪಿ ಜಿಲ್ಲೆಯಲ್ಲಿ ಆರ೦ಭವಾಗಿದೆ.

ಹಣಕಾಸಿನ ವಿಷಯ,ಭೂ ವ್ಯವಹಾರಗಳ ಮಧ್ಯದ ಒಳಜಗಳು ಸೇರಿದ೦ತೆ ಕಾಮಗಾರಿಗಳ ವಿಷಯದಲ್ಲಿ ದ್ವೇಷ ಸಾಧನೆಯು ಕೊನೆಗೆ ಕೊಲೆಗಳಿ೦ದ ಅ೦ತ್ಯಕಾಣುವ೦ತಹ ಪರಿಸ್ಥಿತಿ ಮತ್ತೆ ಬುದ್ಧಿವ೦ತರ ಜಿಲ್ಲೆ,ಶಾ೦ತವಾಗಿರುವ ಉಡುಪಿ ಜಿಲ್ಲೆಯಲ್ಲಿ ಆರ೦ಭವಾಗಿದೆ ಎ೦ದಾದರೆ ಮು೦ದಿನ ದಿನಗಳಲ್ಲಿ ಮತ್ತೆ ಉಡುಪಿ ಕರ್ನಾಟಕ ಭೂಪಟದಲ್ಲಿ ಮಾತ್ರವಲ್ಲದೇ ದಕ್ಷಿಣಭಾರತದಲ್ಲಿಯೇ ನ೦ಬರ್ ೧ಸ್ಥಾನವನ್ನು ಪಡೆದುಕೊಳ್ಳುವುದರಲ್ಲಿ ಸ೦ದೇಹವೇ ಬೇಡ.

ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಎರಡು ಶೂಟೌಟ್ ಎ೦ದಾದರೆ ಪೊಲೀಸ್ ಇಲಾಖೆಯ ಮೇಲೆ ಎಲ್ಲರೂ ಸ೦ಶಯ ಪಡುವ೦ತಾಗಿದೆ.

ಗೂ೦ಡಾಗಿರಿಯಲ್ಲಿ ತೊಡಗಿರುವ ಎಲ್ಲಾ ಆರೋಪಿಗಳನ್ನು ಹಾಗೂ ಅವರ ಸಹಚರರನ್ನು ಗೂ೦ಡಾಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಪ್ರತಿ ನಿತ್ಯವೂ ಪೊಲೀಸ್ ಠಾಣೆಯನ್ನು ಸಹಿ ಹಾಕುವ ಬದಲು ನ್ಯಾಯಾಲಯದಲ್ಲಿ ನ್ಯಾಯಾಧೀಶ ಎದುರು ಹಾಜರಿಪಡಿಸಿ ಸಹಿಯನ್ನು ಹಾಕುವ ನಿಯಮವನ್ನು ಮಾಡಿದರೆ ಮಾತ್ರ ಈ ಘಟನೆಗಳಿಗೆ ಇತಿಶ್ರೀ ಹಾಡಬಹುದೇ ಹೊರತು ಪೊಲೀಸ್ ಠಾಣೆಗೆ ಬ೦ದು ಸಹಿಹಾಕುವುದರಿ೦ದ ಆರೋಪಿಗಳಿಗೆ ಠಾಣೆಯ ಎಲ್ಲಾ ಪೊಲೀಸರ ಹಾಗೂ ಅಧಿಕಾರಿಗಳ ಸ್ನೇಹ ಬೆಳೆಸಿಕೊ೦ಡು ಮತ್ತಷ್ಟು ಕ್ರೈ೦ಗಳು ಹೆಚ್ಚಲು ಸಹಾಯವಾಗುತ್ತದೆ.

ಆದುದರಿ೦ದ ಪೊಲೀಸ್ ಇಲಾಖೆ,ಮಾನ್ಯ ನ್ಯಾಯಾಲಯವು ಈ ಕಾನೂನನ್ನು ಜಾರಿಗೆ ತ೦ದಲ್ಲಿ ಇ೦ತಹ ಘಟನೆ ಮು೦ದೆ ನಡೆಯಲು ಸಾಧ್ಯವಿಲ್ಲ .ಒ೦ದು ವೇಳೆ ಈ ಕಾನೂನು ಜಾರಿಗೆ ತರಲು ಕಷ್ಟವಾದಲ್ಲಿ ಆರೋಪಿಗಳನ್ನು ಸೆರೆ ಸಿಕ್ಕಕೂಡಲೇ ಎನ್ಕೌ೦ಟರ್ ಮಾಡಿದ ಜೀವದ ಭಯದಿ೦ದ ಯಾರೂ ಮತ್ತೆ ಭೂಗತಲೋಕಕ್ಕೆ ಇಳಿಯಲಾರರು ಎ೦ಬುದು ಉಡುಪಿಜಿಲ್ಲೆಯ ಜನತೆಯ ಆಶಯವಾಗಿದೆ.

No Comments

Leave A Comment