```````````````````````````ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:126ನೇ ಭಜನಾ ಸಪ್ತಾಹ ಮಹೋತ್ಸವ ಮ೦ಗಲೋತ್ಸವದತ್ತ-ಉರುಳು ಸೇವೆಯ ಬಳಿಕ ಕೊನೆಯ ಕಾಕಡಾರತಿ ವಿಜೃ೦ಭಣೆಯಿ೦ದ ಸ೦ಪನ್ನ````````````````````
ಕಲ್ಯಾಣಪುರ ವೆಂಕಟರಮಣ ದೇವಸ್ಥಾನದ ಮೊಕ್ತೇಸರರು, ಸಮಾಜ ಸೇವಕ ಕೆ.ಸುದೇಶ್ ಭಟ್ ನಿಧನ
ಕಲ್ಯಾಣ ಪುರ: ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರು, ಸಮಾಜಸೇವಕರು ಹಾಗೂ ಎಲ್ಲರ ಪ್ರೀತಿಯ ಕೆ.ಸುದೇಶ್ ಭಟ್ (54)ರವರು ಬುಧವಾರ ಅಗಸ್ಟ್ 5ರ೦ದು ಅಕಾಲಿಕ ನಿಧನ ಹೊ೦ದಿದ್ದಾರೆ.
ದಿವ೦ಗತ ಕೆ. ವೆ೦ಕಟೇಶ ಭಟ್ ರವರ ದ್ವಿತೀಯ ಪುತ್ರರಾಗಿದ್ದ ಕೆ.ಸುದೇಶ್ ಭಟ್ ರವರು ಯಶಸ್ವಿ ಉದ್ಯಮಿಯಾಗಿದ್ದು, ಪ್ರಸಿದ್ಧ ಕ್ಯಾಟರರ್ಸ್ ಆಗಿ ಶ್ರೀ ವೆಂಕಟರಮಣ ದೇವಸ್ಥಾನದ ಹಾಗೂ ಕಲ್ಯಾಣಪುರ ಜಿ.ಎಸ್.ಬಿ. ಸಮಾಜದ ಅನೇಕ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಅತ್ಯಂತ ಶ್ರದ್ಧೆ, ನಿಷ್ಠೆ ಹಾಗೂ ಸಮರ್ಪಣಾ ಮನೋಭಾವದಿಂದ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿದ್ದರು.
ಕ್ಲಿನಿಕಲ್ ಲ್ಯಾಬೊರೇಟರಿಯ ಮೂಲಕ ಆರೋಗ್ಯ ಸೇವೆ ನೀಡುವುದರ ಜೊತೆಗೆ, ವಿಶೇಷವಾಗಿ ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿ, ಮಾನವೀಯತೆ ಮತ್ತು ಸೇವಾ ಮನೋಭಾವದಿಂದ ಎಲ್ಲರ ಪ್ರೀತಿ, ವಿಶ್ವಾಸ,ಗೌರವಕ್ಕೆ ಪಾತ್ರರಾಗಿದ್ದರು.
ಶ್ರೀ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾಗಿ ಸುಮಾರು ಐದು ವರ್ಷಗಳ ಕಾಲ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ದೇವಸ್ಥಾನದ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ತಮ್ಮ ಅಮೂಲ್ಯ ಸಲಹೆ, ಮಾರ್ಗದರ್ಶನ,ಕಾರ್ಯನಿಷ್ಠೆಯಿಂದ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ.
ಮೃತರು ಪತ್ನಿ,ಒ೦ದು ಹೆಣ್ಣು,ಒ೦ದು ಗ೦ಡುಮಗನನ್ನು ಹಾಗೂ ಬ೦ಧುಗಳನ್ನು ಬಿಟ್ಟಿ ಅಗಲಿದ್ದಾರೆ.
ಶ್ರೀ ವೆಂಕಟರಮಣ ದೇವರು ಹಾಗೂ ಶ್ರೀ ಕ್ಷೇತ್ರದ ಪರಿವಾರ ದೇವತೆಗಳು ಅವರ ದಿವ್ಯ ಆತ್ಮಕ್ಕೆ ಸದ್ಗತಿ ಹಾಗೂ ಚಿರಶಾಂತಿಯನ್ನು ಕರುಣಿಸಲಿ. ಈ ಅಪಾರ ದುಃಖವನ್ನು ಭರಿಸುವ ಶಕ್ತಿ, ಧೈರ್ಯ ಮತ್ತು ಸಾಂತ್ವನವನ್ನು ಅವರ ಕುಟುಂಬದವರಿಗೆ ಅನುಗ್ರಹಿಸಲಿ ಎಂದು ದೇವಸ್ಥಾನ ಆಡಳಿತ ಮ೦ಡಳಿಯ ಸರ್ವಸದಸ್ಯರು,
ಶ್ರೀ ಕ್ಷೇತ್ರ ಕಲ್ಯಾಣಪುರದ ಸಮಸ್ತ ಜಿ.ಎಸ್.ಬಿ. ಸಮಾಜದ ಬಾ೦ಧವರು ಹಾಗೂ ಅಪಾರ ಅಭಿಮಾನಿಗಳು, ಕರಾವಳಿಕಿರಣ ಡಾಟ್ ಕಾ೦ ಬಳಗವು ಸ೦ತಾಪವನ್ನು ಸೂಚಿಸಿದ್ದಾರೆ.
ಗುರುವಾರದ೦ದು ಇವರ ಅ೦ತ್ಯಕ್ರಿಯೆಯು ಕಲ್ಯಾಣಪುರದಲ್ಲಿ ನೆರವೇರಿಸಲಾಯಿತು.