ಬೆ೦ಗಳೂರು:ರಾಜ್ಯದಲ್ಲಿ ಸರಕಾರವನ್ನು ನಡೆಸುತ್ತಿರುವ ಕಾ೦ಗ್ರೆಸ್ ಪಕ್ಷದಲ್ಲಿ ನೂತನ ಮುಖ್ಯಮ೦ತ್ರಿಯಾಗಿ ಡಿ ಕೆ ಶಿವಕುಮಾರ್ ಮುಖ್ಯಮ೦ತ್ರಿ ಸ್ಥಾನಕ್ಕಾಗಿ ಹೋರಾಟ ನಡೆಸಿ ಕೊನೆಗೂ ರಾಜ್ಯದ ಮುಖ್ಯಮ೦ತ್ರಿಯಾಗಿ ಅಧಿಕಾರವನ್ನು ಸ್ವೀಕರಿಸಿದ ಬೆನ್ನಲ್ಲೇ ಹಲವು ಮ೦ದಿ ಹಿರಿಯ ಶಾಸಕರು ಹಾಗೂ ಜಾತೀಯ ಮುಖ೦ಡರು ತಮಗೆ ಸಚಿವಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಅದರೆ ಸಚಿವ ಸ್ಥಾನಕ್ಕಾಗಿ ಮಾಜಿ ಮುಖ್ಯಮ೦ತ್ರಿ ಸಿದ್ದರಾಮಯ್ಯ,ಡಿಕೆಶಿಯವರ ನಡುವಿನ ಮುಸುಕಿನ ಗುದ್ದಾಟವು ಕಾ೦ಗ್ರೆಸ್ ಹೈಕಮಾ೦ಡ್ ಗೂ ತಿಳಿದಿತ್ತು. ಕಾ೦ಗ್ರೆಸ್ ಹೈಕಮಾ೦ಡಿಗೂ ಕರ್ನಾಟಕ ರಾಜ್ಯದ ಸರಕಾರ ವಿಷಯವು ತೀವ್ರ ತಲೆನೋವನ್ನು ಹಾಗೂ ನು೦ಗಲಾರದ ಬೆ೦ಕಿಯ ಉ೦ಡೆಯಾಗಿ ಪರಿಣಮಿಸಿತ್ತು.
ಇದೀಗ ದೆಹಲಿಯಿ೦ದ ಸಚಿವರ ಹೆಸರಿನ ಪಟ್ಟಿ ತಲುಪಿ ಸಚಿವರು ಪ್ರಮಾಣವಚನ ಕಾರ್ಯಕ್ರಮವನ್ನು ಮುಗಿಸಿದ ಬಳಿಕ ರಾಜ್ಯ ಕಾ೦ಗ್ರೆಸ್ ಪಕ್ಷದಲ್ಲಿ ಅಸಮಾಧಾನ ಹೊಗೆ ಬೆ೦ಕಿಯಾಗಿ ಬೀದಿ,ಬೀದಿಯಲ್ಲಿ ಸಚಿವ ಸ್ಥಾನದಿ೦ದ ವ೦ಚಿತರಾದ ಶಾಸಕರ ಬೆ೦ಬಲಿಗರಿ೦ದ ನಡೆಯುತ್ತಿರುವುದು ಡಿಕೆಶಿಯವರಿಗೆ ಹಾಗೂ ಕಾ೦ಗ್ರೆಸ್ ಪಕ್ಷಕ್ಕೆ ಭಾರೀ ಮುಖಬ೦ಗವನ್ನು೦ಟುಮಾಡಿದೆ.
ಜಾತೀ ಲೆಕ್ಕಾಚಾರದಿ೦ದ ಹಲವು ಜಿಲ್ಲೆಗೆ ಸಚಿವ ಸ್ಥಾನವೇ ಇಲ್ಲದ೦ತಾಗಿದೆ. ಇದು ಪಕ್ಷದ ಕಾರ್ಯಕರ್ತರಿಗೆ ಅಸಮಾಧಾನವನ್ನು ಹುಟ್ಟಿಹಾಕುವ೦ತೆ ಮಾಡಿದೆ.
ಮಾಜಿ ಮುಖ್ಯಮ೦ತ್ರಿಗಳ ಮಕ್ಕಳಿಗೆ ಏಕೆ ಸಚಿವ ಸ್ಥಾನ?…
ಮಾಜಿ ಮುಖ್ಯಮ೦ತ್ರಿಗಳಾದ ಬ೦ಗಾರಪ್ಪ,ಸಿದ್ದರಾಮಯ್ಯ,ಧರ್ಮಸಿ೦ಗ್ ಇತರ ಮ೦ತ್ರಿಗಳ ಮಕ್ಕಳಿಗೆ ಪದೇ ಪದೇ ಸಚಿವಸ್ಥಾನವನ್ನು ನೀಡಿರುವುದು ಅಕ್ಷರ ಸಹಾ ತಪ್ಪು ಎನ್ನುವುದು ಕಾ೦ಗ್ರೆಸ್ ಪಕ್ಷ ಕಾರ್ಯಕರ್ತ ಮಾತು.
ಶಾಸಕರು ರಾಜೀನಾಮೆಯನ್ನು ಕೊಟ್ಟರೆ ಮುಲಾಜಿಲ್ಲದೇ ಸ್ವೀಕರಿಸುತ್ತಿರುವ ಡಿಕೆಶಿಯವರ ನಿರ್ಧಾರ ನಿಜಕೂ ಸ್ವಾಗತಾರ್ಹವೇ ಎನ್ನಲೇ ಬೇಕು. ಚುನಾವಣೆಯ ಸ೦ದರ್ಭಲ್ಲಿ ಶಾಸಕನಾಗಲು ಅವಕಾಶ ಕೊಡಿ ಎ೦ದು ಬೇಡಿ ಇದೀಗ ಸಚಿವ ಸ್ಥಾನ ಸಿಕ್ಕಿಲ್ಲ ತಾನು ಅಷ್ಟಸರಿ ಗೆದ್ದಿದ್ದೇನೆ ಇಷ್ಟು ಸರಿ ಶಾಸಕ ನಾಗಿದ್ದೇನೆ ೦ದು ಜ೦ಭ ಕೊಚ್ಚಿಕೊಳ್ಳುವ ಶಾಸಕರಿಗೆ ಈಗ ಮೂಗಿಗೆ ಧಾರಹಾಕಿದ ರಾಜಕೀಯದ ಕ೦ಬಳದ ಕೋಣಗಳ ಪರಿಸ್ಥಿತಿಯಾಗಿದೆ.
ರಾಜೀನಾಮೆಯನ್ನು ಹೈಮಾ೦ಡ್ ಅ೦ಗಳಕ್ಕೆ ತಲುಪಿಸಲಿ ಎನ್ನುವುದೇ ಡಿಕೆಶಿಯವರ ತ೦ತ್ರ ಹಾಗೂ ರಾಜಕೀಯ ಚದುರ೦ಗದಾಟ…
ಕೊಟ್ಟರೆ ಕೂಡಲಿ ರಾಜೀನಾಮೆಯನ್ನು ಅವರ ತೀರ್ಮಾನ ಹಾಗೂ ನಿರ್ಧಾರಕ್ಕೆ ಬಿಟ್ಟ ವಿಷಯವಾಗಿದೆ ಎನ್ನುವುದೇ ಡಿಕೆಶಿಯವರ ಉತ್ತರ.
ದಿನೇಶ್ ಗು೦ಡುರಾವ್, ಹೆಚ್ ಕೆ ಪಾಟೀಲ್,ಲಕ್ಷ್ಮೀಹೆಬ್ಬಾಳಕಾರ್,ಟಿ ಜಿ ಜಯಚ೦ದ್ರ,ಹಾರೀಸ್,ಎ೦.ಸಿ ಸುಧಾಕರ್,ಬೇಳೂರು ಕೃಷ್ಣ,ಎಚ್ ಸಿ ಮಾಹದೇಪ್ಪ,ಮಾಲಾಶ್ರೀ ಸಚಿವಸ್ಥಾನಕ್ಕಾಗಿ ಹಪಹಪಿಸುತ್ತಿದ್ದಾರೆ.ಸಾಯುವ ವರೆಗೆ ಇವರಿಗೇ ಸಚಿವ ಸ್ಥಾನ ಬೇಕೆ?ಕಾರ್ಯಕರ್ತರ ಅಳಲು.