ಉಡುಪಿಯ ಶ್ರೀಕೃಷ್ಣಮಠದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಭರದ ಸಿದ್ದತೆ-ಉತ್ಥಾನ ದ್ವಾದಶಿಯಿ೦ದ ಲಕ್ಷದೀಪೋತ್ಸವ ಆರ೦ಭ.....ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

Commonwealth Games 2026 | ಬಾಕ್ಸಿಂಗ್ ನಲ್ಲಿ ಭಾರತದ ಚಿನ್ನದ ಬೇಟೆ ಆರಂಭ: ಪ್ರೀತಿ, ಜೈಸ್ಮಿನ್ ಗೆ ಚಿನ್ನ

ಗ್ಲಾಸ್ಗೋ: 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಪ್ರೀತಿ ಪವಾರ್ ಮತ್ತು ಜೈಸ್ಮಿನ್ ಅವರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. 54 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ಕೆನಡಾದ ಎಸ್. ಎಸ್. ಡೆಲ್ಗಾಡೊ ಅವರನ್ನು 5-0 ಅಂಕಗಳಿಂದ ಸೋಲಿಸುವ ಮೂಲಕ ಪ್ರೀತಿ ಪವಾರ್ ಚಿನ್ನ ಗೆದ್ದುಕೊಂಡಿದ್ದಾರೆ.

ಪಂದ್ಯದ ಆರಂಭದಿಂದಲೇ ಪ್ರೀತಿ ಪವಾರ್‌ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದರು. 57 ಕೆ.ಜಿ. ಬಾಕ್ಸಿಂಗ್ ವಿಭಾಗದಲ್ಲಿ ಜೈಸ್ಮಿನ್‌ಗೆ ಚಿನ್ನದ ಪದಕ! ಮಹಿಳೆಯರ 57 ಕೆ.ಜಿ. ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಜೈಸ್ಮಿನ್, ಉತ್ತರ ಐರ್ಲೆಂಡ್‌ನ ಮೈಕೇಲಾ ವಾಲ್ಶ್ ಅವರನ್ನು 5-0 ಅಂಕಗಳಿಂದ ಮಣಿಸಿ ಚಿನ್ನದ ಪದಕ ಗೆದ್ದಿದ್ದಾರೆ.

2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಭಾರತ ಐತಿಹಾಸಿಕ ಡಬಲ್ ಗೋಲ್ಡ್ ಸಾಧನೆ ಮಾಡಿದೆ.

ಇನ್ನೂ 8 ಬಾಕ್ಸಿಂಗ್ ವಿಭಾಗಗಳ ಫೈನಲ್ ನಲ್ಲಿ ಭಾರತೀಯರು ಸ್ಪರ್ಧಿಸಲಿದ್ದಾರೆ.

No Comments

Leave A Comment