.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಬಡಾನಿಡಿಯೂರು: ತಾಯಿಯ ಆಸ್ತಿ ಲಪಟಾಯಿಸಲು ನಕಲಿ ಸಹಿ ಬಳಸಿ ವಂಚನೆಗೈದ ಮಗ -ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲು
ಮಲ್ಪೆ:ಜು. 29: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ನಕಲಿ ಸಹಿ ಬಳಸಿ ತಾಯಿಗೆ ವಂಚನೆ ಮಾಡಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಡಾನಿಡಿಯೂರು ಗ್ರಾಮದ ವಿನೋದ್ ಸುವರ್ಣ ವಂಚನೆಗೈದ ಅರೋಪಿ,ಬಡಾನಿಡಿಯೂರಿನ ಸರಸು ಸುವರ್ಣ ಅವರ ಹಿರಿಯ ಮಗ ಅವೀನ್ ಸುವರ್ಣ ಅವರ ಸಂಪಾದನೆಯಿಂದ ಮತ್ತು ಉಡುಪಿಯ ಸಹಕಾರಿ ಸಂಘದ ಸಾಲದ ಹಣದಿಂದ ತೊಟ್ಟಂ ಬಡಾನಿಡಿಯೂರು ಎಂಬಲ್ಲಿ ಜಾಗ ಮತ್ತು ಮನೆಯನ್ನು ಹೊಂದಿದ್ದರು.
ಈ ಮಧ್ಯೆ ಇನ್ನೊಬ್ಬ ಮಗ ಆರೋಪಿ ವಿನೋದ್ ಸುವರ್ಣನು ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು ಲಪಟಾಯಿಸುವ ದುರುದ್ದೇಶದಿಂದ ಸರಸು ಸುವರ್ಣ ಅವರ ಕೆನರಾ ಬ್ಯಾಂಕಿನ ಚೆಕ್‌ಗೆ ಸರಸು ಸುವರ್ಣ ಅವರ ನಕಲಿ ಸಹಿ ಹಾಕಿ ಅ ಹಣವನ್ನು 2ನೇ ಆರೋಪಿತ ಸಂತೋಷ್ ವಿ. ಸಾಲ್ಯಾನ್ ಅವರ ವಿವಿಧ ಸಹಕಾರ ಸಂಸ್ಥೆಯಲ್ಲಿರುವ ಖಾತೆಗೆ ಹಣವನ್ನು ವರ್ಗಾವಣೆ ಮಾಡಿ ವಂಚನೆ ಮಾಡಿರುವ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2026 ಕಲಂ:316, 318(2), 318(4), 335, 336, 336(3), 340(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.