.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ:ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಶ್ರೀ ಗುರು ಪೂರ್ಣಿಮಾ,ಭಜನಾ ಮಹೋತ್ಸವ ಸ೦ಪನ್ನ…

ಉಡುಪಿ: ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿಯಲ್ಲಿ ಬುಧವಾರದ೦ದು ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಕಾರ್ಯ ಕ್ರಮ ಭಜನಾ ಮೋಹೋತ್ಸವ , ಶ್ರೀ ನಿತ್ಯಾನಂದ ಸ್ವಾಮೀಜಿಗೆ ಪಂಚಾಮೃತ ಅಭಿಷೇಕ , ಸೀಯಾಳ ಅಭಿಷೇಕದೊ೦ದಿಗೆ ಶ್ರೀ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ , ಮಹಾ ಮಂಗಳಾರತಿ ಜರಗಿತು.

ಭಜನಾ ಮಹೋತ್ಸವಕ್ಕೆ ಮಂದಿರದ ಅರ್ಚಕರಾದ ಸತ್ಯೇಂದ್ರ ಮಹಾರಾಜ್ ದೀಪ ಬೆಳಗಿಸಿ ಚಾಲನೆ ನೀಡಿದರು.

ಮ೦ದಿರದ ಟ್ರಸ್ಟಿಗಳಾದ ಕೆ ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು, ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ , ವಿಜಿ ಶೆಟ್ಟಿ , ವಿಶ್ವನಾಥ್ ಸನಿಲ್ , ಶ್ರೀಮತಿ ಬಿಂದು ಶೆಟ್ಟಿ , ಹರ್ಷದ ಸೂರ್ಯ ಪ್ರಕಾಶ್ , ತೋನ್ಸೆ ನವೀನ್ ಶೆಟ್ಟಿ, ಮೋಹನ್ ಚಂದ್ರ ನಂಬಿಯಾರ್ , ತಾರಾನಾಥ್ ಮೇಸ್ತ , ಅರ್ಚಕರಾದ ಸುಧಾಕರ್ ಶಾಂತಿ , ಓಂ ಪ್ರಕಾಶ್ , ಟ್ರಸ್ಟಿಗಳು ಆಡಳಿತ ಮಂಡಳಿಯ ಸದಸ್ಯರು , ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಶಾಸಕರಾದ ಯಶಪಾಲ್ ಸುವರ್ಣ ಮಂದಿರಕ್ಕೆ ಭೇಟಿನೀಡಿದ ಸ೦ದರ್ಭದಲ್ಲಿ ಮಂದಿರದ ವತಿಯಿಂದ ಶ್ರೀದೇವರ ಪ್ರಸಾದ ದೊಂದಿಗೆ ಗೌರವಿಸಲಾಯಿತು.

ಹರ್ಷ ಬಳಗದವರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡು ನಿರಂತರ ಭಜನೆ ನೆಡೆಯಿತು.ನ೦ತರ ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾವಿರಾರರು ಭಕ್ತರು, ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡರು.

No Comments

Leave A Comment