....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಪ್ಪಿನಂಗಡಿ| ನಿಂತಿದ್ದ ಟಿಪ್ಪರ್‌ಗೆ ಕಾರು ಢಿಕ್ಕಿ: ಐವರಿಗೆ ಗಾಯ

ಉಪ್ಪಿನಂಗಡಿ: ಜು. 29,ನಿಂತಿದ್ದ ಟಿಪ್ಪರೊಂದರ ಹಿಂಬದಿಗೆ ಕಾರೊಂದು ಢಿಕ್ಕಿಯಾಗಿ ಕಾರಿನಲ್ಲಿದ್ದ 4 ವರ್ಷದ ಮಗು ಸೇರಿದಂತೆ ಐವರು ಗಾಯಗೊಂಡ ಘಟನೆ ಪೆರ್ನೆಯ ಮೈರಕಟ್ಟೆ ಎಂಬಲ್ಲಿ ಜು.28ರಂದು ನಡೆದಿದೆ.

ಕಾರಿನಲ್ಲಿದ್ದ ಚಾಲಕ ಮೊಹಮ್ಮದ್ ಫಾರೂಕ್ (31), ಪ್ರಯಾಣಿಕರಾದ ಫಾತಿಮತ್ ತಸ್ಪಿಯಾ (25), ಜುಲೈಕಾ (52), ಮಹಮ್ಮದ್ ಅಫ್ವಾನ್ (15) ಹಾಗೂ ಮಹಮ್ಮದ್ ಇಲ್ಹಾನ್ (4) ಗಾಯಗೊಂಡವರು. ಮೂಲತಃ ಫರಂಗಿಪೇಟೆಯವರಾದ ಇವರು ಫರಂಗಿಪೇಟೆ ಕಡೆಯಿಂದ ಉಪ್ಪಿನಂಗಡಿ ಕಡೆ ಸಂಚರಿಸುವಾಗ ಈ ದುರ್ಘಟನೆ ನಡೆದಿದೆ.

ಮೈರಕಟ್ಟೆ ಎಂಬಲ್ಲಿ ಹೆದ್ದಾರಿ ಬದಿ ಟಿಪ್ಪರೊಂದು ನಿಂತಿದ್ದು, ಕಾರು ಹಿಂಬದಿಯಿಂದ ಬಂದು ಟಿಪ್ಪರ್‍ಗೆ ಢಿಕ್ಕಿಯಾಗಿದೆ. ಈ ಬಗ್ಗೆ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No Comments

Leave A Comment