.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಪರ್ಕಳ :ರೋಟರಿ ಐಸಿರಿ-ಹುಟ್ಟು ಹಬ್ಬ:ದಿನಬಳಕೆ ಸಾಮಗ್ರಿಗಳ ವಿತರಣೆ
ಪರ್ಕಳ:ಜು. 26: ರೋಟರಿ ಐಸಿರಿಯ ಕ್ರೀಡಾ ವಿಭಾಗದ ಸಂಯೋಜಕರಾದ ರೊ. ಅಶೋಕ್ ನಾಯಕ್ ಅವರ ದ್ವಿತೀಯ ಪುತ್ರ ಚಿ. ಪ್ರಾಂಶ್ ನಾಯಕ್ ಅವರ ಮೂರನೇ ಜನ್ಮದಿನದ ಅಂಗವಾಗಿ ಹಿರಿಯರೊಂದಿಗೆ ಉಪಾಹಾರ ಹಾಗೂ ಸುಮಾರು ರೂ 20,000 ಮೌಲ್ಯದ ದಿನಬಳಕೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಭಾನುವಾರ ಕೊಳಲಗಿರಿಯ ಸ್ವರ್ಗಾಶ್ರಮದಲ್ಲಿ ನಡೆಯಿತು.
ಕಾರ್ಯಕ್ರಮದ ಪ್ರಾಯೋಜಕರಾದ ರೊ. ಅಶೋಕ್ ನಾಯಕ್ ಮಾತನಾಡಿ, ಸಮಾಜದಲ್ಲಿ ವೃದ್ಧಾಶ್ರಮಗಳ ಅನಿವಾರ್ಯತೆ ಹೆಚ್ಚುತ್ತಿರುವುದು ಬೇಸರದ ಸಂಗತಿಯಾದರೂ, ಸ್ವರ್ಗಾಶ್ರಮದಂತಹ ಸಂಸ್ಥೆಗಳು ಹಾಗೂ ಡಾ. ಶಶಿಕಿರಣ್ ಅವರಂತಹ ಸಮಾಜಮುಖಿ ವ್ಯಕ್ತಿಗಳು ಅಸಹಾಯಕರಿಗೆ ಆಶಾಕಿರಣವಾಗಿರುವುದು ಶ್ಲಾಘನೀಯ ಎಂದು ಹೇಳಿದರು. ತಮ್ಮ ಪುತ್ರನ ಮೂರು ಜನ್ಮದಿನಗಳನ್ನೂ ಇಂತಹ ಸೇವಾ ಸಂಸ್ಥೆಗಳ ಮೂಲಕ ಆಚರಿಸಿರುವುದು ಜೀವನದಲ್ಲಿ ವಿಶೇಷ ತೃಪ್ತಿ ತಂದಿದೆ ಎಂದು ತಿಳಿಸಿದರು.
ಸ್ವರ್ಗಾಶ್ರಮವನ್ನು ನಿರ್ವಹಿಸುತ್ತಿರುವ ಹೋಮ್ ಡಾಕ್ಟರ್ ಫೌಂಡೇಶನ್ (ರಿ.) ಮುಖ್ಯಸ್ಥ ಡಾ. ಶಶಿಕಿರಣ್ ಸಂಸ್ಥೆಯ ಸ್ಥಾಪನೆಗೆ ಕಾರಣವಾದ ಹಿನ್ನೆಲೆ ಹಾಗೂ ಹಿರಿಯರ ಆರೈಕೆಗೆ ಅನುಸರಿಸುತ್ತಿರುವ ಸೇವಾ ವಿಧಾನಗಳ ಕುರಿತು ಮಾಹಿತಿ ನೀಡಿದರು.
ದಿನಬಳಕೆ ಸಾಮಗ್ರಿಗಳನ್ನು ಹಸ್ತಾಂತರಿಸಿ ಮಾತನಾಡಿದ ರೋಟರಿ ಐಸಿರಿ ಅಧ್ಯಕ್ಷ ರೊ. ಸಂದೀಪ್ ಕುಮಾರ್, ಇಂದಿನ ಜೀವನಶೈಲಿಯ ಅನಿವಾರ್ಯತೆಯಿಂದ ಅನೇಕ ಕುಟುಂಬಗಳಲ್ಲಿ ವಯೋವೃದ್ಧರು ಏಕಾಂಗಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸ್ವರ್ಗಾಶ್ರಮದಂತಹ ಸಂಸ್ಥೆಗಳು ಹಿರಿಯರಿಗೆ ಸುರಕ್ಷಿತ ಆಶ್ರಯ, ಆತ್ಮೀಯ ವಾತಾವರಣ ಹಾಗೂ ಮನೋಲ್ಲಾಸದಿಂದ ಜೀವನ ಸಾಗಿಸಲು ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ರೋಟರಿ ಐಸಿರಿ ಕಾರ್ಯದರ್ಶಿ ರೊ. ರಾಜೇಶ್ ಡಿ. ಶೆಣೈ ಧನ್ಯವಾದ ಸಮರ್ಪಿಸಿದರು. ರೊ. ಗುರುಪ್ರಸಾದ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ Ann. ಸೌಮ್ಯಾ ಕಾಮತ್, ಶ್ರೀ ಲಕ್ಷ್ಮಣ ಕಾಮತ್, ಶ್ರೀಮತಿ ಲಾವಣ್ಯ, John ಶ್ಲೋಕ್ ನಾಯಕ್, John ಪ್ರಾಂಶ್ ನಾಯಕ್, ರೊ. ಮಂಜುನಾಥ ಉಪಾಧ್ಯ, ರೊ. ಸ್ಮಿತಾ ಜಿ. ಕಾಮತ್, ರೊ. ಕೊರಗಪ್ಪ ಶೆಟ್ಟಿಗಾರ್, ರೊ. ಅನಿಲ್ ಕುಮಾರ್, ರೊ. ಕೃಷ್ಣಪ್ಪ ಹಾಗೂ ರೊ. ವೆಂಕಟೇಶ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ರೊ. ಕೆ. ಪ್ರಕಾಶ್ ಶೆಣೈ ಹಾಗೂ ಉಪಾಹಾರದ ವ್ಯವಸ್ಥೆ ಮಾಡಿದ ರೊ. ನಾಗರಾಜ್ ಅವರಿಗೆ ರೊ. ಅಶೋಕ್ ನಾಯಕ್ ಕೃತಜ್ಞತೆ ಸಲ್ಲಿಸಿದರು.