.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಕಾಮನ್‌ವೆಲ್ತ್ ಗೇಮ್ಸ್: ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತಕ್ಕೆ ಬೆಳ್ಳಿ ಪದಕ

ಗ್ಲ್ಯಾಸ್ಗೋ, ಜು. 26,ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 60 ಕೆಜಿ ತೂಕದ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಚನಂಬಮ್ ಋಷಿಕಾಂತ್ ಸಿಂಗ್ ಬೆಳ್ಳಿ ಪದಕವನ್ನ ತಮ್ಮದಾಗಿಸಿಕೊಂಡಿದ್ದಾರೆ.

ಸ್ನ್ಯಾಚ್ ವಿಭಾಗದಲ್ಲಿ ಮಣಿಪುರದ ಇಂಫಾಲ್ ಮೂಲದ ಋಷಿಕಾಂತ್ ಸಿಂಗ್ 116 ಕೆಜಿ ತೂಕವನ್ನು ತಮ್ಮ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಎತ್ತಿದರು. ತಮ್ಮ ಎರಡನೇ ಪ್ರಯತ್ನದಲ್ಲಿ 119 ಕೆಜಿ ಎತ್ತಿದ ಅವರು, ಮೂರನೇ ಯಶಸ್ವಿ ಪ್ರಯತ್ನದಲ್ಲಿ 121 ಕೆಜಿ ತೂಕವನ್ನು ಎತ್ತಿದರು. ಅವರು 121 ಕೆಜಿ ತೂಕ ಎತ್ತುವ ಮೂಲಕ ಹೊಸ ಕಾಮನ್‌ವೆಲ್ತ್ ಗೇಮ್ಸ್ ದಾಖಲೆ ನಿರ್ಮಿಸಿದ್ದಾರೆ.

ಈ 121 ಕೆಜಿ ತೂಕದ ಎತ್ತುವಿಕೆಯು ಋಷಿಕಾಂತ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ. ಜೊತೆಗೆ ಅವರು ನೂತನ ಕಾಮನ್‌ವೆಲ್ತ್ ಗೇಮ್ಸ್ ಸ್ನ್ಯಾಚ್ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

No Comments

Leave A Comment