.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಲೋಕಾಯುಕ್ತ ದಾಳಿ ನಡೆಯಬೇಕಾದದ್ದು ರಾಜಕೀಯ ಮುಖ೦ಡರ ಮನೆಗೆ ಹೊರತು ಅಧಿಕಾರಿಗಳ ಕಚೇರಿಯಾಗಲಿ ಮನೆಗಲ್ಲ. ಅಧಿಕಾರಿಗಳನ್ನು ಲ೦ಚ ಸ್ವೀಕರಿಸಲು ಕಾರಣೀ ಕರ್ತರಾಗುವಲ್ಲಿ ನಮ್ಮ ಚುನಾಯಿತ ಜನಪ್ರತಿನಿಧಿಗಳಿ೦ದಲೇ ಹೊರತು ಬೇರೆಯಾರಿ೦ದಲೂ ಅಲ್ಲ.
ಲೋಕಾಯುಕ್ತ ಅಧಿಕಾರಿಗಳೇ ಮೊದಲು ಚುನಾಯಿತ ಪ್ರತಿನಿಧಿಗಳ ಮನೆ ಮೇಲೆ ದಾಳಿ ನಡೆಸಿ. ಚುನಾಯಿತ ಪ್ರತಿನಿಧಿಗಳು ಗಳಿಸಿದ ಜನರ ಹಣದ ಲಾಭದ ಹಣ ಎಷ್ಟು ಅ೦ತ ಮೊದಲು ಪತ್ತೆ ಹಚ್ಚಿ.
ಸಸ್ಪೆ೦ಡ್ ಆದ ಅಧಿಕಾರಿಗಳು ಇ೦ದು ರಾಜ್ಯದ ಲೋಕಾಯುಕ್ತದಲ್ಲಿ ಇರುವುದು ಬಿಟ್ಟರೆ ಹೊಸ ಅಧಿಕಾರಿಗಳು ಯಾರೂ ಇಲ್ಲ. ಇದ್ದರೆ ಅವರು ನಿದ್ದೆ ಬಿಟ್ಟು ಕೆಲಸ ಮಾಡುವರಾಗುತ್ತಾರೆ ಹೊರತು ದೂರು ಕೊಟ್ಟರೆ ಮಾತ್ರ ದಾಳಿನಡೆಸಿ ಪುಕ್ಕಟೆ ಪ್ರಚಾರ ಪಡೆದು ಕೊಳ್ಳುವವರೇ ಹೊರತು ಯಾವ ಒಬ್ಬನಿಗೂ ಜೈಲು ಸಿಕ್ಷೆಯಾಗಿದೆಯ? ಲೋಕಾಯುಕ್ತ ದಾಳಿಯಿ೦ದ?
ಹಣ ಕೊಟ್ಟು ಮತ್ತೆ ಅವನು ಅದೇ ಅಧಿಕಾರ ಸ್ಥಾನದಲ್ಲಿ ಇರುವುದು ಬಿಟ್ಟರೆ ನ್ಯಾಯಾಲಯ ಅವರಿಗೆ ಸಹಕರಿಸುತ್ತಿದೆ.
ಉಡುಪಿ ನಗರಸಭೆಯ ಸದಸ್ಯರಾದವರು ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಿ ಎನ್ನುವುದೇ ಉಡುಪಿ ನಗರದ ಮತದಾರರ ಒತ್ತಾಯ.
ಗು೦ಡಿಬೈಲು, ಕಕ್ಕು೦ಜೆ, ಕು೦ಜಿಬೆಟ್ಟು, ಕೊಡವೂರು, ಕೊಳ, ಬನ್ನ೦ಜೆ, ಸಗ್ರಿ, ಇ೦ದ್ರಾಳಿ, ಪರ್ಕಳ ನಗರ ಸಭೆಯ ಸದಸ್ಯರ ಮನೆ ಮೇಲೆ ದಾಳಿ ನಡೆಸಲಿ ಆಗ ಮಾತ್ರ ಲ೦ಚಸ್ವೀಕರಿಸಿದ ಜನಪ್ರತಿನಿಧಿಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಿ ಸಹಕರಿಸುವವರಾಗಲಿ.