ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...
ಮಲ್ಪೆ ಕಡಲ ತೀರದಲ್ಲಿ ಮೇ 15- 31ರವರೆಗೆ ಭಜನಾ ಕಮ್ಮಟ, ಕೃಷಿಮೇಳ, ಮಾತೃ ವಂದನಾ ಕಾರ್ಯಕ್ರಮ
ಉಡುಪಿ:ಶ್ರೀಕೃಷ್ಣ ಪರಿಸರ ಪ್ರತಿಷ್ಠಾನ (ರಿ.) ಮಲ್ಪೆ ಇದರ ವತಿಯಿಂದ, ಉಡುಪಿಯ ಶ್ರೀಕೃಷ್ಣಾಪುರ ಮಠ, ಶ್ರೀಅದಮಾರು ಮಠ, ಶ್ರೀಪಲಿಮಾರು ಮಠ, ಶ್ರೀಪೇಜಾವರ ಮಠ, ಶ್ರೀಸೋದೆ ವಾದಿರಾಜ ಮಠದ ಶ್ರೀಪಾದಂಗಳವರ ಸಂಕಲ್ಪದಂತೆ, ಹಾಗೂ ಶ್ರೀಶ್ರೀ ಈಶಪ್ರಿಯತೀರ್ಥರ ನೇತೃತ್ವದಲ್ಲಿ ಶ್ರೀಕೃಷ್ಣನು ಮಧ್ವರ ಭಕ್ತಿಗೆ ಒಲಿದು ಕಾಣಿಸಿಕೊಂಡು ಅವರ ಕೈ ಸೇರಿದ ಮಲ್ಪೆಯ ಕಡಲತೀರದ ‘ಶ್ರೀಆನಂದ ಶರದಿ’ ಎಂಬ ಪ್ರತಿಷ್ಠಾನದ ನೂತನ ನಿವೇಶನದಲ್ಲಿ ಮೇ 15, 2026 ರಿಂದ ಮೇ 31, 2026 ರವರೆಗೆ “ಅಧಿಕ ಜೇಷ್ಠ ಭಕ್ತಿಸುಧಾ ಭಜನಾ ಸ್ಪರ್ಧೆ ಯನ್ನು ಹಮ್ಮಿಕೊಳ್ಳಲಾಗಿದೆ.
ಅದರ ಜೊತೆಗೆ ಈ ಕೆಳಗಿನಂತೆ ವೈವಿಧ್ಯಮಯ ಧಾರ್ಮಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೂ ನಡೆಯಲಿರುವುದು. ದಿನಾಂಕ: 15-05-2026, ಸಂಜೆ 4.00 ಗಂಟೆಗೆ ಹಲಸು- ಮಾವು, ಕೃಷಿಮೇಳದ ಉದ್ಘಾಟನೆ.
15-05-2026 ರಿ೦ದ 31-05-2026 ಮಾರಾಟ ಮೇಳ. ದಿನಾಂಕ: 18-05-2026, ಮಧ್ಯಾಹ್ನ 3.30 ಗಂಟೆಗೆ ವಡಭಾಂಡೇಶ್ವರದ ಬಲರಾಮ ದೇವಸ್ಥಾನದಿಂದ ಶ್ರೀ ಆನಂದ ಶರಧಿ’ – ಮಲ್ಪೆಯ ಕಡಲತೀರದ ಪ್ರತಿಷ್ಠಾನದ ನೂತನ ನಿವೇಶನದವರೆಗೆ ಗಣ್ಯರೊಂದಿಗೆ ಭವ್ಯ ಶೋಭಾಯಾತ್ರೆ, ತದನಂತರ ಭಜನಾ ಸ್ಪರ್ಧೆಯ ಉದ್ಘಾಟನೆ.
ದಿನಾಂಕ: 24-05-2026 ಬೆಳಿಗ್ಗೆ 7.00 ಗಂಟೆಗೆ ಗ್ರಾಮೀಣ ಕ್ರೀಡಾ ಸ್ಪರ್ಧೆಯ ಉದ್ಘಾಟನೆ.
ದಿನಾಂಕ: 31-05-2026 ಸಂಜೆ 4 ರಿಂದ ಭಜನಾ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ.
ತಾರೀಕು 12-05-2026 ರಂದು ಶ್ರೀಅದಮಾರು ಮಠದ ಗೆಸ್ಟ್ ಹೌಸ್ ನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವ ಸಂಚಾಲಕ ಯಶಾಲ್ ಎ. ಸುವರ್ಣ, ಕಾರ್ಯದರ್ಶಿಗಳಾದ ರತ್ನಕುಮಾರ್, ಪ್ರಧಾನ ಸಂಚಾಲಕರಾದ ಶ್ರೀಶ ಭಟ್ ಕಡೆಕಾರು, ಸಂಚಾಲಕರಾದ ದಿನೇಶ್ ಪುತ್ರನ್ ಮಲ್ಪೆ, ಮಂಜು ಕೊಳ ಮಲ್ಪೆ, ಆರ್ಥಿಕ ಸಲಹೆಗಾರರಾದ ಸಿಎ . ಗಣೇಶ್ ಹೆಬ್ಬಾರ, ಕೃಷ್ಣಮೂರ್ತಿ ಕೆದ್ದಾಯ, ಮಹಿಳಾ ಸಂಚಾಲಕಿಯರಾದ ಶ್ರೀಮತಿ ತಾರಾ ಯು. ಅಚಾರ್ಯ, ಶ್ರೀಮತಿ ನಳಿನಿ ಪ್ರದೀಪ್ ಕುಮಾರ್, ಶ್ರೀಮತಿ ಸುಮಿತ್ರಾ ಕೆರೆಮರ, ಸಂಘಟನಾ ಕಾರ್ಯದರ್ಶಿಗಳಾದ ಪುರುಷೋತ್ತಮ್ ಅಡ್ಡೆ, ವಿಜಯ ಕೊಡವೂರು, ರಾಧಾಕೃಷ್ಣ ಮೆಂಡನ್ (RK) ಮಲ್ಪೆ, ಪ್ರೀತಂ ಭಟ್, ಅರುಣ್ ಕುಂದರ್, ಹಾಗೂ ಗೋವಿಂದರಾಜ್, ಮಂಜು ಕೊಳ ಮಲ್ಪೆ, ಚಂದ್ರಕಾಂತ್, ರಾಧಾಕೃಷ್ಣ ಮೆಂಡನ್, ಸಂತೋಷ್ ಕುಮಾರ್, ಸುಮಿತ್ರಾ ಕೆರೆಮಠ ಮೊದಲಾದವರು ಉಪಸ್ಥಿತರಿದ್ದರು.