.....ದೇಶದೆಲ್ಲೆಡೆಯಲ್ಲಿ ಸ೦ಭ್ರಮದ ದೀಪಾವಳಿ ಹಬ್ಬ...ಗೂಡುದೀಪ,ಸಿಹಿತಿ೦ಡಿ,ಹೊಸಬಟ್ಟೆ
ಯ ಖರೀದಿಯಲ್ಲಿ ನಾಡಿನ ಜನತೆ-ಎಲ್ಲೆಡೆಯಲ್ಲಿ ಪಟಾಕಿಯ ಸದ್ದು.......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ,ಓದುಗರಿ ಬೆಳಕಿನ ಹಬ್ಬ ದೀಪಾವಳಿಯು ಶುಭವನ್ನು೦ಟುಮಾಡಲಿ ಎ೦ದು ಕರಾವಳಿಕಿರಣ ಡಾಟ್ ಶುಭವನ್ನು ಕೋರುತ್ತಿದೆ....
ಮುಂದಿನ ಮೂರು ದಿನಗಳಲ್ಲಿ ಮಾತುಕತೆ: ಡೊನಾಲ್ಡ್ ಟ್ರಂಪ್; ಅಮೆರಿಕವನ್ನು ತುದಿಗಾಲಲ್ಲಿ ನಿಲ್ಲಿಸಿದ ಇರಾನ್!
ವಾಷಿಂಗ್ಟನ್: ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಸೋತು ಗೆದ್ದಿರುವ ಇರಾನ್, ವಿಶ್ವದ ದೊಡ್ಡಣ್ಣ ಎಂದೇ ಬೀಗುತ್ತಿರುವ ಅಮೆರಿಕವನ್ನು ಶಾಂತಿ ಮಾತುಕತೆಗಾಗಿ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಮುಂದಿನ ಮೂರು ದಿನಗಳಲ್ಲಿ ಅಮೆರಿಕ-ಇರಾನ್ ನಡುವೆ ಎರಡನೇ ಸುತ್ತಿನ ಮಾತುಕತೆ ನಡೆಯಬಹುದು ಎಂದು ಪಾಕಿಸ್ತಾನದ ಮೂಲಗಳು ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಪೋಸ್ಟ್ ಬುಧವಾರ ವರದಿ ಮಾಡಿದೆ.
“ಇದು ಸಾಧ್ಯ!” ಮೊದಲ ಸುತ್ತಿನ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದ ಪಾಕಿಸ್ತಾನದ ಮೂಲಗಳ ಬಗ್ಗೆ ಕೇಳಿದಾಗ, ಟ್ರಂಪ್ ಅವರು “ಮುಂದಿನ 36 ರಿಂದ 72 ಗಂಟೆಗಳಲ್ಲಿ ಇಸ್ಲಾಮಾಬಾದ್ನಲ್ಲಿ ಎರಡನೇ ಸುತ್ತಿನ ಮಾತುಕತೆ ನಡೆಯುವ ನಿರೀಕ್ಷೆಯಿದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಪಾಕಿಸ್ತಾನದ ಡಿಜಿಟಲ್ ಸುದ್ದಿ ಸಂಸ್ಥೆಯಾದ ನ್ಯೂಸ್ ಪೋಸ್ಟ್, ಹೆಚ್ಚಿನ ಮಾತುಕತೆಗಳಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಹೆಚ್ಚಿನ ವಿವರಗಳಿಲ್ಲದೆ ವರದಿ ಮಾಡಿದೆ.
ಎರಡು ವಾರಗಳ ಕದನ ವಿರಾಮವನ್ನು ಟ್ರಂಪ್ ಅನಿರ್ದಿಷ್ಟಾವಧಿಗೆ ಮುಂದೂಡಿದ್ದು, ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನದ ವಿನಂತಿಯನ್ನು ಪ್ರಶಂಸಿಸಿದ್ದಾರೆ
ಟ್ರಂಪ್ ಈ ಹಿಂದೆ ಕದನ ವಿರಾಮವನ್ನು ವಿಸ್ತರಿಸುವುದಿಲ್ಲ ಎಂದು ಸೂಚಿಸಿದ್ದರು ಮತ್ತು ಕದನ ವಿರಾಮದ ಅವಧಿ ಮುಗಿದ ನಂತರ ಬಾಂಬ್ ದಾಳಿ ಪುನರಾರಂಭಿಸುವುದಾಗಿ ಎಚ್ಚರಿಕೆ ನೀಡಿದ್ದರು.