.....ದೇಶದೆಲ್ಲೆಡೆಯಲ್ಲಿ ಸ೦ಭ್ರಮದ ದೀಪಾವಳಿ ಹಬ್ಬ...ಗೂಡುದೀಪ,ಸಿಹಿತಿ೦ಡಿ,ಹೊಸಬಟ್ಟೆ ಯ ಖರೀದಿಯಲ್ಲಿ ನಾಡಿನ ಜನತೆ-ಎಲ್ಲೆಡೆಯಲ್ಲಿ ಪಟಾಕಿಯ ಸದ್ದು.......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ,ಓದುಗರಿ ಬೆಳಕಿನ ಹಬ್ಬ ದೀಪಾವಳಿಯು ಶುಭವನ್ನು೦ಟುಮಾಡಲಿ ಎ೦ದು ಕರಾವಳಿಕಿರಣ ಡಾಟ್ ಶುಭವನ್ನು ಕೋರುತ್ತಿದೆ....

ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಮದುವೆಯ ಮೊದಲ ಫೋಟೋ ವೈರಲ್

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ  ಅವರು ಮದುವೆ ಆಗಿದ್ದಾರೆ. ಫೆಬ್ರವರಿ 26ರಂದು ಅದ್ದೂರಿಯಾಗಿ ವಿವಾಹ ನಡೆದಿದೆ. ಮದುವೆ ಫೋಟೋ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗಾಗಿ ರಶ್ಮಿಕಾ ಮತ್ತು ವಿಜಯ್ ಮೊದಲ ಪೋಸ್ಟ್ ಮಾಡಿದ್ದಾರೆ. ತಮ್ಮ ಮದುವೆಯ ಸುಂದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿರೋಶ್ ವಿವಾಹದ ಫೋಟೋಗಳು  ಕ್ಷಣಾರ್ಧದಲ್ಲಿ ವೈರಲ್ ಆಗಿವೆ. ಸತಿ-ಪತಿ ಆಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ತೆಲುಗು ಸಂಪ್ರದಾಯದಂತೆ ವಿರೋಶ್ ಮದುವೆ ನಡೆದಿದೆ. ಈ ಮದುವೆಗೆ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಅಂದಾಜು 100 ಮಂದಿ ಮಾತ್ರ ಈ ಮದುವೆಗೆ ಹಾಜರಿ ಹಾಕಿದ್ದಾರೆ ಎನ್ನಲಾಗಿದೆ. ತೀರಾ ಇತ್ತೀಚಿನ ದಿನಗಳ ತನಕ ಮದುವೆ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಈಗ ಫೋಟೋ ಶೇರ್ ಮಾಡಿದ್ದಾರೆ.

ಹಲವು ವರ್ಷಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಡೇಟಿಂಗ್ ಮಾಡುತ್ತಿದ್ದರು. ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಅವರ ನಡುವೆ ಪ್ರೀತಿ ಚಿಗುರಿತ್ತು. ಆ ಬಗ್ಗೆ ಇಡೀ ಜಗತ್ತಿಗೆ ಅನುಮಾನ ಇದ್ದರೂ ಕೂಡ ಅವರು ಬಹಿರಂಗವಾಗಿ ಏನನ್ನೂ ಹೇಳಿಕೊಂಡಿರಲಿಲ್ಲ. ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

‘ನನ್ನ ಗಂಡನನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ಮಿಸ್ಟರ್ ವಿಜಯ್ ದೇವರಕೊಂಡ. ನನಗೆ ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ಕಲಿಸಿದ ವ್ಯಕ್ತಿ. ಶಾಂತಿಯಿಂದ ಇರುವುದು ಹೇಗೆಂದು ಕಲಿಸಿದ ವ್ಯಕ್ತಿ’ ಎಂಬಿತ್ಯಾದಿ ಸುಂದರ ಸಾಲುಗಳ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

No Comments

Leave A Comment