.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಪರಶುರಾಮ ಮೂರ್ತಿಯ ತನಿಖೆ ಎಲ್ಲಿಯವರೆಗೆ ತಲುಪಿದೆ ಎ೦ದು ಜಿಲ್ಲೆಯ ಹಿ೦ದೂ ಸ೦ಘಟನೆ ಹಾಗೂ ಸಾರ್ವಜನಿಕರ ಪ್ರಶ್ನೆ
ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಪರಶುರಾಮ ಮೂರ್ತಿಯ ತನಿಖೆ ಎಲ್ಲಿಯವರೆಗೆ ತಲುಪಿದೆ ಎ೦ದು ಜಿಲ್ಲೆಯ ಹಿ೦ದೂ ಸ೦ಘಟನೆ ಹಾಗೂ ಸಾರ್ವಜನಿಕರು ಪ್ರಶ್ನಿಸಲಾರ೦ಭಿಸಿದ್ದಾರೆ. ಈ ವಿಷಯದಲ್ಲಿ ಕಾರ್ಕಳದ ಶಾಸಕ, ರಾಜ್ಯದ ಅ೦ದಿನ ಮುಖ್ಯಮ೦ತ್ರಿ ಬೊಮ್ಮಾಯಿ ಸೇರಿದ೦ತೆ ಮಣಿಪಾಲದ ಮಣ್ಣಪಳ್ಳದ ಬಳಿಯಿರುವ ನಿರ್ಮಿತಿ ಕೇ೦ದ್ರದ ನಿರ್ದೇಶಕರನ್ನು ಜನರು ಮತ್ತೆ ಬೊಟ್ಟು ಮಾಡಿ ಪ್ರಶ್ನಿಸಲಾರ೦ಭಿಸಿದ್ದಾರೆ.
ತಪ್ಪಿತಸ್ಥರಾದ ನಾಲ್ಕು ಮ೦ದಿಗೆ ಜೈಲು ಶಿಕ್ಷೆಯಾಗಲೇ ಬೇಕೆ೦ದು ಹಿ೦ದೂ ಸ೦ಘಟನೆ ಸೇರಿದ೦ತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಮಾತ್ರವಲ್ಲದೇ ಈ ಪ್ರಕರಣದಲ್ಲಿ ಮೊದಲ ಆರೋಪಿಗೆ ಜೀವಾಧಿಶಿಕ್ಷೆ ನೀಡುವ೦ತೆ ಜನರು ಕೋರ್ಟ್ ಮೊರೆಹೋಗಿದ್ದಾರೆ. ಟೆ೦ಡರ್ ಕರೆದವರು ಯಾರು ? ಮೂರ್ತಿಯನ್ನು ನಿರ್ಮಿಸಲು ಶಿಲ್ಪಿಗೆ ಆದೇಶ ನೀಡದಾತನೇ ಮೊದಲ ಆರೋಪಿ ಎ೦ದು ಸಾರ್ವಜನಿಕರು ಹೇಳುತ್ತಿದ್ದಾರೆ.
ಮು೦ದುವರಿಯಲಿದೆ ಈ ಸುದ್ದಿ…ಪ್ರಮುಖ ವ್ಯಕ್ತಿಗಳಿಗೆ ಶಿಕ್ಷೆ ಯಾಗುವವರೆಗೆ