ಮಧ್ಯಪಾನವನ್ನು ಬ೦ದ್ ಮಾಡುವ೦ತೆ ಬಹುತೇಕ ಜನರು ಹಾಗೂ ನಮ್ಮ ಕರಾವಳಿ ಕಿರಣ ಡಾಟ್ ಕಾ೦ ಮಾನ್ಯ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ ಮತ್ತು ಅಬಕಾರಿ ಎಸ್ಪಿಯವರನ್ನು ವಿನ೦ತಿಸಿದ್ದರ ಪರಿಣಾಮ ಎಣ್ಣೆ ಬ೦ದ್...

ಶೀರೂರು ಮಠದ ಪರ್ಯಾಯ: ರಥಬೀದಿಯ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ 24ಗ೦ಟೆ ಉಚಿತ ತುರ್ತು ಚಿಕಿತ್ಸೆಗೆ ಚಾಲನೆ

ಶೀರೂರು ಮಠದ ಪರ್ಯಾಯ ಮಹೋತ್ಸವದ ಅಂಗವಾಗಿ ರಥಬೀದಿಯ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ ನಿರಂತರ 24 ತಾಸುಗಳ ಉಚಿತ ತುರ್ತು ಚಿಕಿತ್ಸಾ ಶಿಬಿರವನ್ನು ಸ್ವಾಗತ ಸಮಿತಿ, ವೈದ್ಯ ವೃಂದ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯ, ಸ್ಥಳೀಯ ವೈದ್ಯರು ಹಾಗೂ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದು.

ಶಿಬಿರವನ್ನು ಶೀರೂರು ಮಠದ ದಿವಾನರಾದ ಉದಯ ಕುಮಾರ್ ಸರಳತ್ತಾಯ ಚಾಲನೆಯನ್ನುನೀಡಿ ಶುಭಹಾರೈಸಿದರು. ಚಿಕಿತ್ಸಾಲಯದ ವೈದ್ಯರಾದ ಡಾ. ಸತೀಶ್ ರಾವ್, ಡಾ. ಜಯಂತ್ ,ಕೆ.ಆರ್ ಕೆ ಭಟ್ ,ಶಿವಾನ೦ದ ಭ೦ಡಾರ್ಕರ್ ಡಾ.ಅರ್ಚನಾ ರಾವ್ ಚಿಕಿತ್ಸಾಲಯ ಸಿಬ್ಬ೦ದಿ ವರ್ಗದವರು ಹಾಗೂ ತುರ್ತು ಚಿಕಿತ್ಸಾ ವಾಹನದ ವೈದ್ಯರಾದ ಡಾ. ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು.

 

No Comments

Leave A Comment