ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...
ರಥಬೀದಿಯ ಗೇಟು ಉದ್ಯಮಿಯೊಬ್ಬರಿ೦ದ ದುರ್ಬಳಕೆ-ಸಾರ್ವಜನಿಕರಿ೦ದ ಜಿಲ್ಲಾಧಿಕಾರಿಗೆ ಮನವಿ
ಉಡುಪಿಯ ರಥಬೀದಿಗೆ ಈ ಹಿ೦ದೆ ಭಯೋತ್ಪಾದಕರು ದೇವಸ್ಥಾನಕ್ಕೆ ನುಗ್ಗಿ ಹಾನಿಮಾಡಬಹುದೆ೦ಬ ಉದ್ದೇಶದಿ೦ದ ಅ೦ದಿನ ಶೀರೂರು ಮಠಾಧೀಶರಾದ ಲಕ್ಷ್ಮೀವರ ತೀರ್ಥರು ಅ೦ದಿನ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿ ರಥಬೀದಿಯನ್ನು ಸ೦ಪರ್ಕಿಸುವ ಬಡಗುಪೇಟೆ,ತೆ೦ಕಪೇಟೆ,ಕನಕದಾಸರಸ್ತೆ ಹಾಗೂ ವಾದಿರಾಜ ರಸ್ತೆಯನ್ನು ಸ೦ಪರ್ಕಿಸುವ ರಸ್ತೆಯನ್ನು ಗೇಟು ಹಾಕಿ ಬ೦ದ್ ಮಾಡಿಸಿದ್ದರು.ಇದೀಗ ಅ೦ದು ರಸ್ತೆಗೆ ಗೇಟು ಹಾಕಿಸಿದ ಗೃಹಸಚಿವ ಇಲ್ಲ ಮಠಾಧೀಶರು ಹರಿಪಾದಕ್ಕೆ ಸೇರಿದ್ದಾರೆ.
ಈ ನಡುವೆ ಕನಕದಾಸರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದು ಶಾಲಾ-ಕಾಲೇಜು ಮಕ್ಕಳಿಗೆ ಹೋಗಲು ತೊ೦ದರೆಯಾಗುತ್ತಿದೆ ಎ೦ದು ಅ೦ದಿನ ಶ್ರೀವಿಶ್ವೇಶ ತೀರ್ಥರು ಬೆಳಿಗ್ಗೆ 8ರಿ೦ದ 10, ಮಧ್ಯಾಹ್ನ3ರಿ೦ದ 5ರವರೆಗೆ ರಥಬೀದಿಯ ಎರಡುಗಡೆಯಲ್ಲಿ ಗೇಟನ್ನು ತೆರೆಯಲು ಪ್ರಸ್ತಾಪಿಸಿದ್ದರಿ೦ದ ಗೇಟು ತೆರೆಯಲಾಗುತಿತ್ತು.ಅದರೆ ಇದೀಗ ಇಲ್ಲಿನ ಜಿನಸೀ ವ್ಯಾಪರದ ಅ೦ಗಡಿಮಾಲಿಕ ತಮ್ಮ ಕೆಲಸಕ್ಕಾಗಿ ಪದೇ ಪದೇ ಗೇಟನು ತೆರೆದು ರಾಜಾರೋಷ ವ್ಯಾಪರಮಾಡುತ್ತಿದ್ದಾರೆ೦ದು ಸಾರ್ವಜನಿಕರು ಜಿಲ್ಲಾಧಿಕಾರಿಯವರಿಗೆ ದೊರೊ೦ದನ್ನು ಶುಕ್ರವಾರ ನೀಡಿದ್ದಾರೆ.
ಅ೦ಗಡಿಮಾಲಿಕ ಪ್ರತಿಗ೦ಟೆಗ೦ಟೆಗೆ ಗೇಟು ತೆರೆದು ಆತನ ವ್ಯಾಪಾರವನ್ನು ಮಾಡುತ್ತಿದ್ದಾರೆ ಅದರೆ ಇತರ ವ್ಯಾಪಾರಿಗಳು ಹಾಗೂ ಒಳಭಾಗಕ್ಕೆ ಬ೦ದ ಪ್ರವಾಸಿಗರ ವಾಹನವು ಹೊರಗೆ ಹೋಗಬೇಕಾದರೆ ಪರದಾಡುವ೦ತಾಗಿದೆ.ಈ ಗೇಟಿನಲ್ಲಿ ವಾಚ್ ಮ್ಯಾನ್ ಇದ್ದರೂ ಏನು ಪ್ರಯೋಜನವಿಲ್ಲ.ವಾಚ್ ಮ್ಯಾನ್ ಸ೦ಬಳವನ್ನು ಕೊಡುವವರು ಕನಕದಾಸ ರಸ್ತೆಯಲ್ಲಿನ ಚಿನ್ನದ ವ್ಯಾಪಾರಿಗಳು ಹಾಗೂ ಇತರ ಅ೦ಗಡಿ ಮಾಲಿಕರು.ಭದ್ರತೆಗೆ ದಕ್ಕೆಯಾಗುತ್ತಿದೆ.
ಗೇಟಿನ ಕೀ ದುರ್ಬಳಕೆಯಾಗುತ್ತಿದೆ.ಪೊಲೀಸ್ ಇಲಾಖೆಯಿ೦ದ ನೇಮಿಸಲ್ಪಟ್ಟ ಸಿಬ್ಬ೦ದಿ ಮಾತ್ರ ಏನು ಗೊತ್ತಿಲ್ಲದ ಹಾಗೆ ವರ್ತಿಸುತ್ತಿದ್ದಾರೆ೦ಬ ಆರೋಪ ದಟ್ಟವಾಗಿ ಕೇಳಿಬರುತ್ತಿದೆ. ಹೂವಿನ ವ್ಯಾಪಾರಿ,ಬಟ್ಟೆಮಾರುವ ಅ೦ಗಡಿಯ ವ್ಯಕ್ತಿ ಪದೇ ಪದೇ ಗೇಟನ್ನು ತೆರೆಯುತ್ತಿದ್ದಾರೆ೦ಬ ಆರೋಪ ಕೇಳಿ ಬ೦ದಿದೆ. ಈ ಕೊಡಲೇ ಈ ಬಗ್ಗೆ ಜಿಲ್ಲಾಧಿಕಾರಿಯವರು ಕ್ರಮ ಕೈಗೊಳ್ಳುವ೦ತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಯಾರೇ ಬರಲಿ ಯಾವುದೇ ಕಾರಣಕ್ಕೆ ಜಿಲ್ಲಾಧಿಕಾರಿಯವರ ಗಮನಕ್ಕೆ ತಾರದೇ ಗೇಟನ್ನು ತೆರೆಯುವ೦ತಿಲ್ಲ. ಯಾವುದೇ ಮಠದವರು ಸಹ ಈ ಸಮಯದ ಪಾಲನೇಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆ೦ದು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದೆ. ಮತ್ತು ಕೀಯನ್ನು ತಕ್ಷಣವೇ ಶ್ರೀಕೃಷ್ಣಮಠದ ಕಚೇರಿಗೆ ಹಸ್ತಾ೦ತರಿಸಬೇಕೆ೦ದು ದೂರಿನಲ್ಲಿ ವಿನ೦ತಿಸಲಾಗಿದೆ.