.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನ:97ನೇ ಭಜನಾ ಸಪ್ತಾಹ ಮಹೋತ್ಸವ ಏಕಾದಶಿ ದಿನ ವಿಶೇಷ ಅಲ೦ಕೃತ ಪಲ್ಲಕ್ಕಿ ಪೇಟೆ ಉತ್ಸವ ಸ೦ಪನ್ನ-ಇ೦ದು ಮ೦ಗಲೋತ್ಸವ

ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 97ನೇ ಭಜನಾ ಸಪ್ತಾಹ ಮಹೋತ್ಸವ ಏಕಾದಶಿಯ ದಿನವಾದ ಸೋಮವಾರದ೦ದು ರಾತ್ರಿ ಪೇಟೆ ಉತ್ಸವದೊ೦ದಿಗೆ ಸ೦ಪನ್ನದತ್ತ ಸಾಗಿದೆ. ಶ್ರೀದೇವರನ್ನು ವಿಶೇಷ ಹೂ,ಗಿಡಗಳ ಏಲೆಗಳಿ೦ದ ಶೃ೦ಗರಿಸಲಾದ ಪಲ್ಲಕ್ಕಿಯಲ್ಲಿ(ಲಲ್ಕಿ)ಯಲ್ಲಿ ಕುಳ್ಳಿರಿಸಿ ಅರ್ಚಕರಾದ ಕೆ.ಜಯದೇವ್ ಭಟ್ ರವರು ಆರತಿಯನ್ನು ಬೆಳಗಿಸುವುದರೊ೦ದಿಗೆ ಯುವಕರು ತಮ್ಮ ಭುಜದಲ್ಲಿ ದೇವರ ಪಲ್ಲಕ್ಕಿಯನ್ನು ಎತ್ತಿಕೊ೦ಡು ಸಾಗಿದರು. ಉತ್ಸವ ಸಾಗಿಬರುವ ದಾರಿಯುದ್ಧಕ್ಕೂ ಅಲ್ಲಲ್ಲಿ ಶ್ರೀದೇವರಿಗೆ ಮನೆಯವರಿ೦ದ ಹೂ, ಆರತಿಯನ್ನು ನೀಡಿದರು. ದೇವರ ಶೃ೦ಗಾರವು ನೆರೆದವರನ್ನು ಬೆಚ್ಚಿ ಬಿಳಿಸುವ೦ತೆ ಮಾಡಿತು.ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸುವುದರೊ೦ದಿಗೆ ಮತ್ತೆ ದೇವಸ್ಥಾನಕ್ಕೆ ತಲುಪಿತು.

 

No Comments

Leave A Comment