.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಕನಕನ ಕಿ೦ಡಿಯ ಬಳಿಯ ಭಜನೆ ನಡೆಯುತ್ತಿರುವ ವೇದಿಕೆಗೆ ಪರಿಹಾರವಿಲ್ಲವೇ?

ಉಡುಪಿ:ಪಲಿಮಾರು ಮಠದ ಪರ್ಯಾಯದ ಸ೦ದರ್ಭದಲ್ಲಿ ಕನಕನ ಕಿ೦ಡಿಯ ಬಳಿಯಲ್ಲಿ ಅಹೋರಾತ್ರಿ ಭಜನಾ ಕಾರ್ಯಕ್ರಮವು ಅವರ ಪರ್ಯಾಯದ ಎರಡು ವರ್ಷಗಳ ಕಾಲ ಭಜನಾ ಸ೦ಕೀರ್ತನೆಯು ನಡೆದಿತ್ತು.ಅದರ ಬಳಿಕದ ಪರ್ಯಾಯದ ಬಳಿಕ ಈ ಭಜನಾ ಸ೦ಕೀರ್ತನೆಯು ಬೆಳಿಗ್ಗೆಯಿ೦ದ ಸ೦ಜೆಯವರೆಗೆ ಸೀಮಿತವಾಯಿತು.ಇದರ ಎಲ್ಲಾ ಅಭಿವೃದ್ಧಿಮಾಡಲಾಗುತ್ತಿದೆಯಾದರೂ ಈ ಭಜನೆ ನಡೆಯುವ ಸ್ಥಳದಲ್ಲಿ ನಿರ್ಮಿಸಲಾದ ವೇದಿಕೆಯು ಮಳೆಯಿ೦ದ ಸೊರುತ್ತಿದೆ.

ಇದಕ್ಕೆ ನೀಲಿಬಣ್ಣದ ಟರ್ಪಲು ಹೊದಿಸಲಾಗಿದೆ.
ಈ ಬಗ್ಗೆ ಹಲವರು ಮ೦ದಿ ಭಕ್ತರು ತಮ್ಮ ಅಳನ್ನು ತೋಡಿಕೊಳ್ಳುತ್ತಿದ್ದಾರೆ.ಇಷ್ಟೆಲ್ಲಾ ಅದರೂ ಈ ವೇದಿಕೆಯ ಸಮಸ್ಯೆ ಪರಿಹಾರ ಮಾಡಲು ಕಷ್ಟವೇ ಎ೦ದು ಬೀದಿಯಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸ೦ಬ೦ಧ ಪಟ್ಟವರು ಈ ಬಗ್ಗೆ ಗಮನ ಹರಿಸಿ ತಕ್ಷಣವೇ ಸರಿಪಡಿಸುವರೇ?

No Comments

Leave A Comment