ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ಎಸ್ ಎಲ್ ವಿ ಟಿ ಯಲ್ಲಿ ” ದೇವ ದೇವ ಸದ್ಗುರು ದೇವ ” ಭಕ್ತಿ ಸಂಗೀತ ಕಾರ್ಯಕ್ರಮ ಸ೦ಪನ್ನ
ಉಡುಪಿ:ಶ್ರೀ ಲಕ್ಷ್ಮೀ ವೆಂಕಟೇಶ್ ಕಲಾ ಸೇವಾ ಟ್ರಸ್ಟ್ ಇವರ ಆಶ್ರಯದಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನದಲ್ಲಿ ಸ.21 ರಂದು ಶ್ರೀದೇವರ ಸನ್ನಿಧಿಯಲ್ಲಿ ಪ್ರಸಿದ್ಧ ಬಾಲ ಕಲಾವಿದೆ ಪೂರ್ಣ ಮಲ್ಯ ಮುಂಬಯಿ ಇವರಿಂದ ” ದೇವ ದೇವ ಸದ್ಗುರು ದೇವ ” ಭಕ್ತಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಹಾರ್ಮೋನಿಯಂ ಶಂಕರ್ ಶೆಣೈ , ಪಕ್ವಾಜದಲ್ಲಿ ಆರ್ ಎನ್ ಮಲ್ಯ , ತಬ್ಬಲದಲ್ಲಿ ಸುಶಾಂತ್ ಮಲ್ಯ , ತಾಳ ವಸಂತ್ ಮಲ್ಯ ಸಹಕರಿಸಿದರು. ದೇವಳದ ವತಿಯಿಂದ ಕಲಾವಿದರನ್ನು ಗೌರವಿಸಲಾಯಿತು.