.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ನ್ಯೂಯಾರ್ಕ್‌ಗೆ ಹಿಂತಿರುಗುತ್ತಿದ್ದ ಬಸ್ ಪಲ್ಟಿ; ಭಾರತೀಯರು ಸೇರಿ ಐದು ಮಂದಿ ಮೃತ್ಯು

ಆಲ್ಬನಿ:ಆ. 24,ನಯಾಗರಾ ಫಾಲ್ಸ್ ವೀಕ್ಷಿಸಿ ನ್ಯೂಯಾರ್ಕ್‌ಗೆ ಹಿಂತಿರುಗುತ್ತಿದ್ದ ಬಸ್‌ವೊಂದು ಪಲ್ಟಿ ಹೊಡೆದ ಪರಿಣಾಮ ಭಾರತೀಯರು ಸೇರಿ ಐವರು ಮೃತಪಟ್ಟಿರುವ ಘಟನೆ ಪೆಂಬ್ರೋಕ್‌ನಲ್ಲಿ ಸಂಭವಿಸಿದೆ.

ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 54 ಪ್ರಯಾಣಿಕರ ಪೈಕಿ ಐದು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರೆಲ್ಲರು ವಯಸ್ಕರಾಗಿದ್ದಾರೆ. ಬಸ್ ಪಲ್ಟಿಯಾದ ವೇಳೆ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಹೆಲಿಕಾಪ್ಟರ್ ಹಾಗೂ ಆಂಬ್ಯುಲೆನ್ಸ್ ಮೂಲಕ 40ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ನ್ಯೂಯಾರ್ಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಟೇಟನ್ ಐಲ್ಯಾಂಡ್‌ನ ಎಂ&ವೈ ಟೂರ್ ಲಿಂಕ್ ನಿರ್ವಹಿಸುತ್ತಿದ್ದ ಈ ಬಸ್, ಕಳೆದ ಎರಡು ವರ್ಷಗಳಲ್ಲಿ ಯಾವುದೇ ಅಪಘಾತಗಳ ದಾಖಲೆಯನ್ನು ಹೊಂದಿರಲಿಲ್ಲ ಎಂದು ವರದಿಯಾಗಿದೆ.

No Comments

Leave A Comment