ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ....ಚಿತ್ತಾಪುರದಲ್ಲಿ RSS ಪಥ ಸಂಚಲನ: ವಿವಿಧ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಹೈಕೋರ್ಟ್ ಆದೇಶ
ಉಡುಪಿ: ವಾರ್ತಾ ಇಲಾಖೆ ಸಿಬ್ಬಂದಿ ಪ್ರೇಮಾನಂದ್ ರಾವ್ ಗೆ ಬೀಳ್ಕೊಡುಗೆ
ಉಡುಪಿ: Aug.1.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ ಕಚೇರಿಯಲ್ಲಿ ಕಳೆದ 26 ವರ್ಷ ಗಳಿಂದ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪ್ರೇಮಾನಂದ್ ರಾವ್ ಇವರಿಗೆ ಬೀಳ್ಕೊಡುಗೆ ವಾರ್ತಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಇಲಾಖೆಯ ಸಹಾಯಕ ನಿರ್ದೇಶಕ ಬಿ.ಮಂಜುನಾಥ್ ಮಾತನಾಡಿ ಪ್ರೇಮಾನಂದ್ ರಾವ್ 1999ರಿಂದ ಉಡುಪಿ ಕಚೇರಿಯಲ್ಲೇ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿ, ಇದೀಗ ಸೇವೆಯಿಂದ ವೃತ್ತರಾಗುತಿದ್ದಾರೆ. ಅನ್ಯೋನ್ಯ ಸ್ನೇಹವನ್ನು ಎಲ್ಲರೊಂದಿಗೆ ಹೊಂದಿದ್ದ ಇವರ ನಿವೃತ್ತಿ ಜೀವನ ಸುಖಕರವಾಗಿರಲಿ. ನಿವೃತ್ತಿ ಜೀವನದಲ್ಲಿ ಸುಖ,ಶಾಂತಿ, ನೆಮ್ಮದಿ, ಉತ್ತಮ ಅರೋಗ್ಯ ದೇವರ ಅರೋಗ್ಯ ದೇವರು ಕರುಣಿಸಲಿ ಎಂದು ಹಾರೈಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರೇಮಾನಂದ್ ರಾವ್ ಹಾಗೂ ಅವರ ಧರ್ಮಪತ್ನಿ ಶೋಭಾ ಅವರಿಗೆ ಶಾಲು ಹೊದಿಸಿ, ಫಲ ತಾಂಬೂಲ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಹಾಗೂ ಡಿಡಿಆರ್‌ಸಿ ಸಿಬ್ಬಂದಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು.
ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಸುಚಿತ್ರಾ, ಹರೀಶ್, ಸತೀಶ್ ಶೇಟ್ ಉಪಸ್ಥಿತರಿದ್ದರು.