ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಮಣಿಪಾಲ ಮಹಿಳಾ ಸಮಾಜದ ಸ್ಥಾಪಕರ ದಿನಾಚರಣೆ ಸಾಧಕರಿಗೆ ಸನ್ಮಾನ
ಮಣಿಪಾಲ: ಅಗಸ್ಟ್ :01,ಮಹಿಳಾ ಸಮಾಜ ಮಣಿಪಾಲ ಇದರ 63 ನೇ ಸ್ಥಾಪಕ ದಿನಾಚರಣೆ ರೋಟರಿ ಹಾಲ್ ಮಣಿಪಾಲ ಇತ್ತೀಚಿಗೆ ನೆಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲ ಮಾಹೆಯ ಶ್ರೀಮತಿ ವಸಂತಿ ರಾಮದಾಸ್ ಪೈ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮಹಿಳಾ ಸಮಾಜ ಮಣಿಪಾಲ ಇದರ ಸ್ಥಾಪಕರಾದ ದಿವಂಗತ ಶಾರದ ಪೈ, ಡಾ ಪದ್ಮ ರಾವ್ ಇವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾದ ಡಾ ರಾಜಶ್ರೀ ಎಸ್ ಕಿಣಿ ಯವರು ಸಮಾಜದ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ನಾರಾಯಣಿ ನಾಯಕ್ , ಸಪ್ನಾ ಸಾಲಿನ್ಸ್ , ಏಕ್ತಾ ಜೈನ್ , ಪ್ಲಾವಿಯಾ ಮೆಂಡೋಂಕಾ ರವರನ್ನು ಗೌರವಿಸಿ ಮಾತನಾಡಿದರು , ಮಹಿಳೆಯರು ದೈನಂದಿನ ಕೆಲಸ ಕಾರ್ಯ ಜೊತೆ ಆರೋಗ್ಯದ ಹೆಚ್ಚಿನ ಗಮನ ಹರಿಸಬೇಕು ಕರೆ ನೀಡಿದರು ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ಶೃತಿ ಶೆಣೈ , ಉಪಾಧ್ಯಕ್ಷೆ ವ್ಯಜಯಂತಿ ಕಾಮತ್ , ಕಾರ್ಯದರ್ಶಿ ವಿಜಯಲಕ್ಷ್ಮೀ, ಸಹ ಕಾರ್ಯದರ್ಶಿ ಏಕ್ತ ಜೈನ , ಖಂಚಾಚಿ ಶಾಲಿನಿ ಜಿ ನಾಯಕ್ ,ರೇಷ್ಮಾ ತೋಟ ಉಪಸ್ಥಿತರಿದ್ದರು.