.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:125ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಬಿರುಸಿನ ಸಿದ್ಧತೆ

ಉಡುಪಿ: ಉಡುಪಿ ಇತಿಹಾಸ ಪ್ರಸಿದ್ಧ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವಕ್ಕೆ ಈ ಬಾರಿ 125ನೇ ವರ್ಷದಾಗಿದೆ.ಈಗಾಗಲೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಬೇಕಾಗುವ ಸಕಲ ಸಿದ್ದತೆಯನ್ನು ಬಿರುಸಿನಿ೦ದ ಮಾಡಲಾಗುತ್ತಿದೆ.

ಮುಖ್ಯವಾಗಿ ಒ೦ದುವಾರಗಳ ಕಾಲ ಪೂಜೆ ನಡೆಯಲಿರುವ ಶ್ರೀವಿಠೋಬರಖುಮಾಯಿ ದೇವರ ಪೀಠವನ್ನು ಹಾಗೂ ಮೂರ್ತಿಯನ್ನು ಜೋಡಿಸುವ ಕೆಲಸವು ಮುಕ್ತಾಯದಹ೦ತದಲ್ಲಿದ್ದು ಇದಕ್ಕಾಗಿ ಬೇಕಾಗುವ ಎಲ್ಲಾ ಸ್ವಚ್ಚತಾ ಕೆಲಸದಲ್ಲಿ ದೇವಸ್ಥಾನ ಸಿಬ್ಬ೦ದಿ ವರ್ಗದವರು ಶ್ರಮಿಸುತ್ತಿದ್ದಾರೆ. ದೇವಸ್ಥಾನದ ಒಳಾ೦ಗಣ ಮತ್ತು ಹೊರಾ೦ಗಣದ ಶುಶ್ಚಿತ್ವದ ಕೆಲಸವು ಮುಕ್ತಾಯಗೊ೦ಡಿದೆ. july 3oಬುಧವಾರದ೦ದು ಮಧ್ಯಾಹ್ನ 12.05ಕ್ಕೆ 125ನೇ ಭಜನಾ ಕಾರ್ಯಕ್ರಮಕ್ಕೆ ದೇವತಾಪ್ರಾರ್ಥನೆಯೊ೦ದಿಗೆ ಚಾಲನೆ ದೊರಕಲಿದೆ.

ಊರ-ಪರವೂರಿನ ಹಲವಾರು ಭಹನಾ ಮ೦ಡಳಿಗಳು ಮತ್ತು ಉತ್ತಮ ಕಲಾವಿದರು ಈ ಬಾರಿಯ ಸಪ್ತಾಹ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ. 

No Comments

Leave A Comment