.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ “ಶ್ರೀ ಗುರುಪೂರ್ಣಿಮಾ” ಅದ್ದೂರಿಯಿ೦ದ ಸ೦ಪನ್ನ(45pic)

ಉಡುಪಿ:ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿಯಲ್ಲಿ ಗುರುವಾರದ೦ದು ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಕಾರ್ಯ ಕ್ರಮ ಭಜನಾ ಮೋಹೋತ್ಸವವು ಶ್ರೀ ನಿತ್ಯಾನಂದ ಸ್ವಾಮೀಜಿಗೆ ಪಂಚಾಮೃತ ಅಭಿಷೇಕ , ಸೀಯಾಳ ಅಭಿಷೇಕ ನಡೆಯಿತು.

ಭಜನಾ ಮೋಹೋತ್ಸವಕ್ಕೆ ಹರ್ಷದ ಸೂರ್ಯ ಪ್ರಕಾಶ್ ದೀಪ ಬೆಳಗಿಸಿ ಚಾಲನೆ ನೀಡಿದರು . ಹರ್ಷ ಬಳಗದವರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡು ವಿವಿಧ ಭಜನಾ ಮ೦ಡಳಿಗಳಿ೦ದ ನಿರಂತರ ರಾತ್ರಿವರೆಗೆ ಭಜನಾ ಕಾರ್ಯಕ್ರಮವು ನಡೆಯಿತು.

ಕೆ. ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು , ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ , ತೋನ್ಸೆ ನವೀನ್ ಶೆಟ್ಟಿ , ಮೋಹನ್ ಚಂದ್ರನಂಬಿಯಾರ್ , ತಾರಾನಾಥ್ ಮೇಸ್ತ , ಅರ್ಚಕರಾದ ಓಂ ಪ್ರಕಾಶ್ , ಅಮಿತ್ ಶುಕ್ಲಾ ಧಾರ್ಮಿಕ ಪೂಜಾ ಕಾರ್ಯ ಡೆಸಿಕೊಟ್ಟರು.

ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಗುರುವಾರ ರಾತ್ರೀ ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ನೆಡೆಯಿತು. ಶ್ರೀ ನಿತ್ಯಾನಂದ ಸ್ವಾಮೀಜಿಗೆ ವಿಶೇಷ ಹೂವಿನ ಅಲಂಕಾರದೊ೦ದಿಗೆ ವಿಶೇಷ ಪೂಜೆ ಜರಗಿತು.

No Comments

Leave A Comment