ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ “ಶ್ರೀ ಗುರುಪೂರ್ಣಿಮಾ” ಅದ್ದೂರಿಯಿ೦ದ ಸ೦ಪನ್ನ(45pic)
ಉಡುಪಿ:ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿಯಲ್ಲಿ ಗುರುವಾರದ೦ದು ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಕಾರ್ಯ ಕ್ರಮ ಭಜನಾ ಮೋಹೋತ್ಸವವು ಶ್ರೀ ನಿತ್ಯಾನಂದ ಸ್ವಾಮೀಜಿಗೆ ಪಂಚಾಮೃತ ಅಭಿಷೇಕ , ಸೀಯಾಳ ಅಭಿಷೇಕ ನಡೆಯಿತು.
ಭಜನಾ ಮೋಹೋತ್ಸವಕ್ಕೆ ಹರ್ಷದ ಸೂರ್ಯ ಪ್ರಕಾಶ್ ದೀಪ ಬೆಳಗಿಸಿ ಚಾಲನೆ ನೀಡಿದರು . ಹರ್ಷ ಬಳಗದವರಿಂದ ಭಜನಾ ಕಾರ್ಯಕ್ರಮ ಆರಂಭಗೊಂಡು ವಿವಿಧ ಭಜನಾ ಮ೦ಡಳಿಗಳಿ೦ದ ನಿರಂತರ ರಾತ್ರಿವರೆಗೆ ಭಜನಾ ಕಾರ್ಯಕ್ರಮವು ನಡೆಯಿತು.
ಕೆ. ದಿವಾಕರ್ ಶೆಟ್ಟಿ ತೋಟದಮನೆ ಕೊಡವೂರು , ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಬನ್ನಂಜೆ , ಕಾರ್ಯದರ್ಶಿ ಈಶ್ವರ ಶೆಟ್ಟಿ ಚಿಟ್ಪಾಡಿ , ತೋನ್ಸೆ ನವೀನ್ ಶೆಟ್ಟಿ , ಮೋಹನ್ ಚಂದ್ರನಂಬಿಯಾರ್ , ತಾರಾನಾಥ್ ಮೇಸ್ತ , ಅರ್ಚಕರಾದ ಓಂ ಪ್ರಕಾಶ್ , ಅಮಿತ್ ಶುಕ್ಲಾ ಧಾರ್ಮಿಕ ಪೂಜಾ ಕಾರ್ಯ ನಡೆಸಿಕೊಟ್ಟರು.
ಮಧ್ಯಾಹ್ನ ಮಹಾಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಗುರುವಾರ ರಾತ್ರೀ ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಮಹೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ನೆಡೆಯಿತು. ಶ್ರೀ ನಿತ್ಯಾನಂದ ಸ್ವಾಮೀಜಿಗೆ ವಿಶೇಷ ಹೂವಿನ ಅಲಂಕಾರದೊ೦ದಿಗೆ ವಿಶೇಷ ಪೂಜೆ ಜರಗಿತು.